ಜನಮನ ರಂಜಿಸಿದ ‘ನವಿಲೂರು ನಿಲ್ದಾಣ’

0
32
loading...

ಕನ್ನಡಮ್ಮ ಸುದ್ದಿ-ನರಗುಂದ: ಚಿತ್ರದುರ್ಗ ಜಮುರಾ ಕಲಾವಿದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ನವಿಲೂರು ನಿಲ್ದಾಣ ನಾಟಕ ಪ್ರದರ್ಶನಗೊಂಡಿತು. ಕೆಪಿಸಿಸಿ ಸದಸ್ಯ ಎಸ್‌.ಡಿ. ಕೊಳ್ಳಿಯವರ ನಾಟಕ ಉದ್ಘಾಟಿಸಿದರು. ವೇದಿಕೆ ಮೇಲೆ ಬಸವ ಕೇಂದ್ರದ ಅಧ್ಯಕ್ಷ ವ್ಹಿ.ಎನ್‌. ಕೊಳ್ಳಿಯವರ, ಚನ್ನಬಸಪ್ಪ ಕಂಠಿ, ಸಿ.ಎಚ್‌. ಕೋರಿ, ಶಂಕ್ರಪ್ಪ ವಾಳದ, ಮಾಬಳೇಶ ಘಟ್ಟದ, ರವಿ ಬ್ಯಾಹಟ್ಟಿ ಹಾಗೂ ಬಸವಕೇಂದ್ರದ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ರಸ್ಕಿನ್‌ ಬಾಂಡ್‌ ಕತೆ ಆಧಾರಿತ ಮಹಂತೇಶ ರಾಮುದುರ್ಗ ನಿರ್ಧೆಶನದಲ್ಲಿ ನಾಟಕ ಚೆನ್ನಾಗಿ ಮೂಡಿ ಬಂದಿತು. ಬಸ್‌ ನಿಲ್ದಾಣದಲ್ಲಿ ನಡೆಯುವ ಅವಾಂತರಗಳು ಹಾಗೂ ಹೊಟ್ಟೆಪಾಡಿಗೆ ನಾಟಕೀಯ ರೂಪದಲ್ಲಿ ಜನರಿಂದ ಹಣ ಕೀಳುವುದು ಕಥಾ ಹಂದರದ ಪ್ರಮುಖ ಅಂಶಗಳನ್ನು ನಾಟಕದಲ್ಲಿ ಚೆನ್ನಾಗಿ ಪ್ರದರ್ಶಿಸಲಾಯಿತು.
ಸತ್ಯಪ್ಪ ಎಂಬ ಮೂಡನಿಗೆ ದೊರೆತ ಒಂದು ಗಂಟು ಅದರಲ್ಲಿ ಏನಿದೆ ಎನ್ನುವುದೇ ಆತನಿಗೆ ಗೊತ್ತಿರುವುದಿಲ್ಲ. ಅನೇಕರು ಅವನನ್ನು ಅಪಹಾಸ್ಯಗೊಳಿಸುವ ತಂತ್ರಗಾರಿಕೆ ನಾಟಕದಲ್ಲಿ ನಮ್ಮ ಮೌಡ್ಯತೆಗಳ ಅರಿವನ್ನು ಮೂಡಿಸುವ ಮಹಾನ್‌ ಸಂಗತಿಗಳ ಸಂಗ್ರಹ ಎಳೆ ಎಳೆಯಾಗಿ ನಾಟಕದಲ್ಲಿ ಪ್ರಸ್ತುತಪಡಿಸಿದ್ದು ಸೊಗಸಾಗಿತ್ತು. ಓರ್ವ ಯುವಕ ಹಾಗೂ ಓರ್ವ ಯುವತಿ ಇವರೀರ್ವರು ಅಂಧರು. ಅಂದ ಹುಡುಗಿ ಬೆಳಕಿನೂರಿಗೆ ಹೋಗಲು ನಿಲ್ದಾಣಕ್ಕೆ ಬಂದಿದ್ದರೆ ಪ್ರೇಮದೂರಿಗೆ ತೆರಳು ಅಂಧ ಯುವಕ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಬಸ್‌ ಒಂದು ಗಂಟೆ ತಡವಿದೆ ಎನ್ನುವ ಮಾಹಿತಿ ತಿಳಿದು ನಿಲ್ದಾಣದ ಒಂದು ಸ್ಥಳದಲ್ಲಿರುವ ಕಟ್ಟೆಯ ಮೇಲೆ ಕುಳಿತುಕೊಂಡು ಹರಟೆಹೊಡಿಯುತ್ತಾರೆ. ಈ ಮಧ್ಯೆ ಆಗಾಗ ಕಾಣಿಸಿಕೊಳ್ಳುವ ಕಥಾ ಪ್ರಸಂಗದಲ್ಲಿಯ ಕಲಾವಿದರು ನೈಜ ಬದುಕಿನಲ್ಲಿ ನಡೆಯುವ ಎಲ್ಲ ಸಂಗತಿಗಳನ್ನು ಚರ್ಚಿಸುವುದರಿಂದ ಇದನ್ನೆಲ್ಲ ಕೇಳಿಸಿಕೊಳ್ಳುವ ಅಂದ ಯುವಕ ಮತ್ತು ಯುವತಿ ಕಣ್ಣು ಅಗತ್ಯವೇ ಎನ್ನುವಷ್ಟರ ಮಟ್ಟಿಗೆ ಪರಾಮರ್ಶಿತಗೊಳ್ಳುವ ಈ ಕಥಾ ಹಂದರ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿತು.
ಸತ್ಯಪ್ಪನ ಪಾತ್ರದಲ್ಲಿ ಶರಣು ಉತ್ತಮ ಅಭಿನಯ ನೀಡಿದರು. ವಿವಿಧ ಪಾತ್ರಗಳಲ್ಲಿ ಕಾಂಚನಾ, ಗಿರೀಶ, ರಂಜನಿ, ಯಶವಂತ, ಹರೀಶ ಬಂಡಾರಿ, ವಿರೇಶ ಪೇಠೆ, ಸೋಮಶೇಖರ, ತಿಪ್ಪೇಶ, ಚಿನ್ನಸ್ವಾಮಿ, ಮಾಲಾ, ಮಹೇಶ ಉತ್ತಮ ಅಭಿನಯ ಪ್ರದರ್ಶನ ನೀಡಿದರು. ಉಮೇಶ ಪತ್ತಾರ, ರಾಜು ಪತ್ತಾರ ಸಂಗೀತ ಸೊಗಸಾಗಿತ್ತು. ಶಿಕ್ಷಕ ಹಾದಿಮನಿ ನಿರೂಪಿಸಿದರು. ಬಸವ ಕೇಂದ್ರದ ಅಧ್ಯಕ್ಷ ವ್ಹಿ.ಎನ್‌. ಕೊಳ್ಳಿಯವರ ವಂದಿಸಿದರು.

loading...