ಜನರ ಸಮಸ್ಯೆ ಪರಿಹಾರಕ್ಕೆ ಮುತುವರ್ಜಿ ವಹಿಸಲು ಕರೆ

0
12
loading...

ಗದಗ : ಅಕ್ರಮ ಸಕ್ರಮ, ಉತಾರಗಳಲ್ಲಿನ ಲೋಪದೋಷ ಮೊದಲಾದ ಸಾರ್ವಜ£ಕ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಬೇಟಿ ನೀಡಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ನುಡಿದರು.ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜರುಗಿದ “ಜಿಲ್ಲಾ ಮಟ್ಟದ ಜನಸ್ಪಂದನ ( ಸಾರ್ವಜನಿಕರ ಕುಂದುಕೊರತೆ ಸಭೆ)ಯನ್ನು ಜರುಗಿಸಿ ಮಾತನಾಡಿದರು. ವೃದ್ದಾಪ್ಯ ವೇತನ ನೀಡುವ ಅಂಚೆ ಕಚೇರಿಯವರು ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ ಮಾಡಬೇಕು. ತಹಶೀಲ್ದಾರರು ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕುರಿತಂತೆ ಪ್ರತಿ ತಿಂಗಳು ಬ್ಯಾಂಕ್, ಖಜಾನೆ ಹಾಗೂ ಅಂಚೆ ಇಲಾಖೆಗಳಿಂದ ನಿಯಮಿತವಾಗಿ ಮಾಹಿತಿ ಪಡೆಯಬೇಕು.
ವಸತಿ ಯೋಜನೆಯಡಿ ಆಶ್ರಯ ಮನೆ ನಿರ್ಮಾಣ, ಗಣಕೀಕೃತ ಭೂ ದಾಖಲಾತಿ (ಉತಾರ), ಕೆರೆ ಒತ್ತುವರಿ, ಆಧಾರ ನೋಂದಣಿ, ಬೆಳೆ ವಿಮೆ, ಪಿಂಚಣಿ ವಿತರಣೆ, ವೃದ್ಧಾಪ್ಯ ವೇತನ, ಎಸ್.ಸಿ. ರಸ್ತೆ ಕಾಲನಿಯಲ್ಲಿ ಸಿಸಿ. ರಸ್ತೆ ನಿರ್ಮಾಣ, ಏತ ನೀರಾವರಿ ಯೋಜನೆಯಡಿ ಜಮೀನು ಕಳೆದುಕೊಂಡಿರುವ ರೈತರಿಗೆ ಪರಿಹಾರ, ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದವರಿಗೆ ಉದ್ಯೋಗ ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಒಟ್ಟು 33 ಅರ್ಜಿಗಳನ್ನು ಸ್ವೀಕರಿಸಿ ಅವುಗಳ ಪರಿಹಾರ ಕುರಿತು ಚರ್ಚೆ ನಡೆಯಿತು. ಜಿ.ಪಂ.ಮುಖ್ಯ ಕಾರ್ಯ£ರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಜಿ.ಪಂ. ಉಪಕಾರ್ಯದರ್ಶಿ ಎಸ್.ಸಿ. ಮಹೇಶ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಎಲ್ಲ ತಾಲೂಕಿನ ತಹಶೀಲ್ದಾರರುಗಳು, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

loading...