ಜಾಗತಿಕ ಸ್ಪರ್ಧೆಗೆ ಸಂವಹನ ಸಾಮರ್ಥ್ಯ ವೃದ್ಧಿ: ಪಾಟೀಲ

0
18
loading...

ಗದಗ: ಯುವಜನರಿಗೆ ಉದ್ಯೋಗ ಒದಗಿಸಲು ಇಂದಿನ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಅವರ ಸಂವಹನ ಸಾಮರ್ಥ್ಯ ಸಮರ್ಥವಾಗಿರಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಗದಗ ಜಿಲ್ಲಾಡಳಿತವು ರಾಜ್ಯದಲ್ಲೇ ಮೊದಲ ಸುವ್ಯವಸ್ಥಿತ ಸಂವಹನ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಆರಂಭಿಸಿರುವುದ ಅಭಿನಂದನೀಯ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್‌ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ನುಡಿದರು.
ಗದುಗಿನ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದ ಸಂಕೀರ್ಣದ ಮೊದಲ ಅಂತಸ್ತಿನಲ್ಲಿ ವಿಧ್ಯಾರ್ಥಿ, ಯುವಜನರು ಹಾಗೂ ಶಿಕ್ಷಕರ ಸಂವಹಣ ಸಾಮರ್ಥ್ಯ ವೃದ್ಧಿ ಕೇಂದ್ರ(ಇ-ಸ್ಟೇಶನ್‌ ಸ್ಕಿಲ್‌ ಲ್ಯಾಬ) ಉದ್ಘಾಟಿಸಿ ಅವರು ಮಾತನಾಡಿದರು. ವಿಧ್ಯಾರ್ಥಿಗಳಲ್ಲಿ ವಿದ್ಯೆ ಇದ್ದರೂ ಇಂಗ್ಲೀಷ ಮಾತನಾಡುವ, ಸಂವಹಣ ನಡೆಸುವ ಕಲೆ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪರಿಣಿತರಿಂದ ಅವರಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ಸಂವಹಣ ಕೌಶಲ್ಯಾಭಿವೃದ್ಧಿ ಸೌಲಭ್ಯವನ್ನು ಒದಗಿಸಲು ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಉತ್ತಮ ಕಾರ್ಯ ಮಾಡಿದ್ದಾರೆ. ಇದರಿಂದ ಜಿಲ್ಲೆಯ ಶಿಕ್ಷಕರಿಗೆ, ವಿಧ್ಯಾರ್ತಿ, ಯುವಮಿತ್ರರಿಗೆ ಹೆಚ್ಚಿನ ಉಪಯೋಗ ಆಗಲಿ ಎಂದು ಸಚಿವ ಎಚ್‌.ಕೆ.ಪಾಟೀಲ ನುಡಿದರು.
ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಮಾತನಾಡಿರು. ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ಶ್ರೀಮತಿ ರೂಪಾ ಅಂಗಡಿ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ಗದಗ ತಾ.ಪಂ. ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ಎ.ಆರ್‌.ನದಾಫ್‌, ಜಿ.ಪಂ. ಸದಸ್ಯ ಸಿದ್ದು ಪಾಟೀಲ, ನಗರ ಸಭೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೇಘಾ ಮುದ್ಗಲ್‌, ಸದಸ್ಯರಾದ ಶಿವಲೀಲಾ ಅಕ್ಕಿ, ಜ್ಯೋತಿ ಇರಾಳ, ನಾಮನಿರ್ದೇಶಿತ ಸದಸ್ಯ ಚಾಂದಸಾಬ ಕೊಟ್ಟೂರ, ಜಿ.ಪಂ. ಸಿ.ಇ.ಓ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ, ಪೌರಾಯುಕ್ತ ಮನ್ಸೂರ ಅಲಿ, ಯುವ ಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ.ವಿಶ್ವನಾಥ ಉಪಸ್ಥಿತರಿದ್ದರು.

loading...