ಜಾನಪದ ಉತ್ಸವ, ಭಿತ್ತಿ ಪತ್ರ ಬಿಡುಗಡೆ

0
32
loading...

ಕನ್ನಡಮ್ಮ ಸುದ್ದಿ-ಕಾರವಾರ: ಇದೇ ಜ.26ರಿಂದ 28ರವರೆಗೆ ಮೂರುದಿನಗಳ ಕಾಲ ನಡೆಯಲಿರುವ ಅಮದಳ್ಳಿ ಜಾನಪದ ಉತ್ಸವ 2018ರ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮ ಅಮದಳ್ಳಿಯ ಗ್ರಾಮಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ಉತ್ಸವದ ಮೊದಲ ದಿನ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ, ಮಹಾಭಾರತ ಖ್ಯಾತಿಯ ಮಸ್ಕೇರಿ ತಂಡದ ದೀಪಕ ರೈ ಮತ್ತು ಸಂಗಡಿಗರಿಂದ ಹಾಸ್ಯದ ಹೊನಲು, ಮೂರು ಮುತ್ತು ಖ್ಯಾತಿಯ ಸತೀಶ ಪೈ ಮತ್ತು ಸಂಗಡಿಗರಿಂದ ನಗೆನಾಟಕ ಮಾಸ್ಟರ್‌ ಪ್ಲಾನ್‌ ಕಾರ್ಯಕ್ರಮಗಳು ನಡೆಯಲಿದೆ. 27ರಂದು ಕಾಮಿಡಿ ಕಿಲಾಡಿ-2 ಖ್ಯಾತಿಯ ಸದಾನಂದ ಮತ್ತು ಸಂಗಡಿಗರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ, ಉದಯೋನ್ಮುಖ ನಟಿ ಸೋನು ಪಾಟೀಲ್‌, ಚಲನಚಿತ್ರ ನಟಿ ಜಯಶ್ರೀ, ಮಂಡ್ಯ ಜಯರಾಮ್‌ ಆಗಮಿಸಲಿದ್ದು, ಜ್ಯೂ.ವಿಷ್ಣುವರ್ಧನ ಮತ್ತು ಸಂಗಡಿಗರಿಂದ ಸೂಪರ್‌ ಹಿಟ್‌ ನಗೆ ನಾಡಕ ಕಿವುಡ ಮಾಡಿದ ಕಿತಾಪತಿ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ರಾಜ್ಯದ 150 ಬುಡಕಟ್ಟು ಕಲಾವಿದರಿಂದ ಜಾನಪದ ಸಂಭ್ರಮ, ದಿ ರಾಕರ್ಸ್‌ ಗೋವಾ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಇವುಗಳಲ್ಲದೇ ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ ನಾಗಪುರ ಪ್ರಾಯೋಜಿತ ಛತ್ತಿಸಘಡ ರಾಜ್ಯದ ಪಂಥಿ ನೃತ್ಯ, ಮಹಾರಾಷ್ಟ್ರದ ಲಾವಣಿ, ಬೀದರ್‌ ಜಿಲ್ಲೆಯ ಚಕ್ರಿ ಭಜನ್‌ ಮೂರುದಿನಗಳ ಪ್ರಮುಖ ಆಕರ್ಷಣೆಯಾಗಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ಜಾನಪದ ಕ್ರೀಡೆ, ಆಕರ್ಷಕ ಸ್ಟಾಲ್‌, ಆಹಾರ ಮಳಿಗೆ, ಜಾನಪದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಸತ್ಯನಾರಾಯಣ ಪಡ್ತಿ, ದೇವಾನಂದ ಚಂಡೇಕರ್‌, ಚಂದ್ರಕಾಂತ್‌ ಚಿಂಚಣಕರ್‌, ಮಹೇಶ ಬಿಣಗೇಕರ್‌ ಮುಂತಾದವರು ಇದ್ದರು.

loading...