ಜೆಸಿಐ ಸಂಸ್ಥೆ ಕಾರ್ಯ ಶ್ಲಾಘನೀಯ: ಪ್ರಕಾಶ

0
27
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಅನೇಕ ಸಮಾಜ ಸೇವಾ ಸಂಸ್ಥೆಗಳಲ್ಲಿ ಜೆಸಿಐ ಸಂಸ್ಥೆಯು ಒಂದು ಯುವ ಜನತೆಯನ್ನು ಗುರುತಿಸಿ ಅವರಿಗೆ ಸೂಕ್ತವಾದ ತರಬೇತಿಯನ್ನು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತಿದೆ ಎಂದು ರಾಷ್ಟೀಯ ಉಪಾಧ್ಯಕ್ಷ ಪ್ರಕಾಶ.ಡಿ ಹೇಳಿದರು.
ಸ್ಥಳೀಯ ತಿರುಮಲ ಗಾರ್ಡನ್‌ ಆವರಣದಲ್ಲಿ ನಡೆದ ಜೆಸಿಐ ಸಂಸ್ಥೆಯ 2018ರ ಅಧಿಕಾರ ಹಸ್ತಾಂತರ ಹಾಗೂ ಪದಗ್ರಹಣ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಜೇಸಿಐ ಸಂಸ್ಥೆ ಮಾತ್ರ ಜಗತ್ತಿನಲ್ಲಿಯೇ ಯುವಜನತೆಗೆ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಿ ಉತ್ತಮ ನಾಗರಿಕರನ್ನಾಗಿ ನಿರ್ಮಿಸುವ ಏಕೈಕ ವಿಶ್ವಸಂಸ್ಥೆಯಾಗಿದೆ. ಅಧಿಕಾರಕ್ಕಾಗಿ ಕಚ್ಚಾಡದೆ ಒಂದು ವರ್ಷದ ಅವಧಿ ಮುಗಿದ ನಂತರ ಸ್ವಸಂತೋಷದಿಂದ ತಾವು ಮಾಡಿದ ಸಾಧನೆಗಳನ್ನು ತಿಳಿಸುತ್ತಾ ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡುವದರೊಂದಿಗೆ ಪ್ರತಿಯೊಬ್ಬರಿಗೂ ನಾಯಕತ್ವವನ್ನು ಬೆಳೆಸಿಕೊಳ್ಳಲು ಈ ಸಂಸ್ಥೆ ಅವಕಾಶ ಕಲ್ಪಿಸಿಕೊಡುತ್ತದೆ.
ಜೇಸಿ ಸೋಮಶೇಖರ ಹಿರೇಸೊಮನ್ನವರ, ಸುನೀಲ ನಿರ್ವಾಣಿ, ಶಂಕರ ಜಿರಂಕಳಿ ವಲಯ ಉಪಾದ್ಯಕ್ಷರಾದ ಡಾ. ಕುಮಾರಗೌಡ ಪಾಟೀಲ ನೂತನ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿ ಮಾತನಾಡಿದರು. ಅಶೋಕ ಕುಲಗೋಡ, ಸುರೇಶ ಹುಚ್ಚನ್ನವರ, ಚಂದ್ರು ಮಾಳದಕರ, ಎಸ್‌.ಎಸ್‌.ಮಾತನವರ, ಡಾ. ಸಾಗರ ದೇಸಾಯಿ, ಪಿ.ಬಿ.ತೆಗ್ಗಿಹಳ್ಳಿ, ಎಸ್‌.ಕೆ. ಹೂಗಾರ, ಎಲ್‌.ಐ.ಕಳ್ಳಿ, ಎಸ್‌.ಐ.ಮಳಗಲಿ, ಆರ್‌.ಬಿ.ಪಮ್ಮಾರ, ಪ್ರವೀಣ ಹೆಗಡೆ, ಮಹಾಂತೇಶ ಹೊಸಮನಿ, ಮಂಜು ಎಚ್‌. ತುಕಾರಾಮ ಪಮ್ಮಾರ, ಶಿವಾನಂದ ಬರದೆಲಿ, ಮುತ್ತು ಬನ್ನೂರ, ಹನಮಂತ ಕುರಿ, ಕುಮಾರ ಬೆಳ್ಳೆವರಿ ಭಾಗವಹಿಸಿದ್ದರು. ಕುಮಾರಿ ಸ್ಪರ್ಷಾ ಜಿನಗಾ ಮನರಂಜನೆ ಕಾಯಕ್ರಮ ನೀಡಿದರು ಜೇಸಿ ರಮೇಶ ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಐ.ಪಿ.ಮುಳ್ಳೂರ ಸ್ವಾಗತಿಸಿದರು ಕಾರ್ಯದರ್ಶಿ ಜೇಸಿ ವಿಜಯಮಹಾಂತೇಶ ಜಿನಗಾ ವಂದಿಸಿದರು.

loading...