ಜೇನುನೋನ ಕಚ್ಚಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

0
32
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಣಬರ್ಗಿ ನಗರದ ಸಿದ್ಧೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಯಲ್ಲಿ ತೋಡಗಿದ್ದ ಗ್ರಾಮಸ್ಥರ ಮೇಲೆ ಭಾನುವಾರ ಜೇನು ನೋಣಗಳು ದಾಳಿ ನಡೆಸಿದ ಪರಿಣಾಮ 100ಕ್ಕೂ ಹೆಚ್ಚು ಜನರಿಗೆ ಗಾಯ ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಸುಮಾರು 20 ಜನರು ಜಿಲ್ಲಾಸ್ಪತ್ರೆ ಸೇರಿದ ಘಟನೆ ನಡೆದಿದೆ.
ಗಾಯಗೊಂಡವರಲ್ಲಿ 12 ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಸ್ಥಾನದ ಕಟ್ಟಡದ ಸ್ಲಾಬ್‍ಗೆ ಗ್ರಾಮಸ್ಥರೇ ಸೇರಿ ಕಾಂಕ್ರಿಟ್ ಸುರಿಯುತ್ತಿದ್ದರು. ಜನರ ಗುಂಪು ಮತ್ತು ಸಿಮೆಂಟ್ ಬೆರೆಸುವ ಯಂತ್ರಗಳ ಸದ್ದಿನಿಂದ ಸಮೀಪದಲ್ಲಿದ್ದ ಜೇನು ನೋಣಗಳು ಜನರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಕೆಲಸದಲ್ಲಿ ತೋಡಗಿದ್ದವರು ಎಲ್ಲರು ಓಡಿದರೂ ಜೇನು ನೊಣಗಳು ಬೆನ್ನುಬಿಡದೆ ಗ್ರಾಮಸ್ಥರ ಜತೆ ದೇವಸ್ಥಾನಕ್ಕೆ ಬಂದ ಭಕ್ತರನ್ನೂ ಕಚ್ಚಿದೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾನುವಾರ ರಜೆ ಎಂದು ದೇವಸ್ಥಾನಕ್ಕೆ ಬಂದಿದ್ದ ಮಡಕೇರಿ ಮೂಲದ ಜಯಕುಮಾರ ರೈ ಎನ್ನುವವರಿಗೆ ಹೆಚ್ಚಿನ ಗಾಯಗಳಾಗಿವೆ. ಇವರ ಸ್ನೇಹಿತ ಗದಗ ಮೂಲದ ಬಸವರಾಜ ಸೊರಬದ, ಗುತ್ತಿಗೆದಾರ, ಹಳಗಾದ ಶ್ರೀಹರಿ ವಾಳಕೆ, ಕಣಬರಗಿಯ ಲಕ್ಷ್ಮಣ ದನಾಯಿ, ಅರ್ಜುನ ಮುಚ್ಚಂಡಿಕರ, ನಿಂಗಾಣಿ ಗೋವೇಕರ, ಮಹೇಶ ಗೋವೇಕರ, ಲಕ್ಷ್ಮಣ ಕರಡೆ, ಸಿದ್ದಾರ್ಥ ಮುಚ್ಚಂಡಿಕರ, ಬಾಳು ಗೂಗರಟ್ಟಿ, ಮಹೇಶ ಗೋವೇರಕ, ಪರಶುರಾಮ ಗೂಗರಟ್ಟಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

loading...