ಜೈನಾಪೂರ ಬಹುಗ್ರಾಮ ಕುಡಿವ ನೀರಿನ ಯೋಜನೆ ಪುನರ್‌ನಿಾಗಲಿ

0
27
loading...

ಚಿಕ್ಕೋಡಿ 12: ಜೈನಾಪೂರ ಗ್ರಾಮದ 13 ಹಳ್ಳಿಗಳಿಗೆ ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಪೈಪಗಳನ್ನು ಬದಲಾವಣೆ ಮಾಡಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಒತ್ತಾಯ ಮಾಡಿದರೂ ಸಹ ಕುಡಿಯುವ ನೀರಿನ ಸಮಸ್ಯೆ ಈಡೇರಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.ತಾಲೂಕಿನ ಜೈನಾಪೂರ ಮತ್ತು ಕರೋಶಿ ಗ್ರಾಮದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಕಾಲೋನಿಗಳಲ್ಲಿ ತಲಾ 25 ಲಕ್ಷ ರೂ.ಗಳ ವೆಚ್ಚದಲ್ಲಿ ಪೇವರ ಬ್ಲಾಕ್‌ ಅಳವಡಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು. ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎರಡು ಗ್ರಾಮದ ದಲಿತ ಕಾಲೋನಿಗಳಲ್ಲಿ ಮೂಲಸೌಲಭ್ಯ ಒದಗಿಸುವಲ್ಲಿ ಶಾಸಕ ದುರ್ಯೋಧನ ಐಹೊಳೆ ಅವರು ಸತತ ಪ್ರಯತ್ನ ಮಾಡಿದ್ದಾರೆ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಹೇಶ ಭಾತೆ, ನಿಂಗಪ್ಪ ಕುರುಬರ, ಗ್ರಾ.ಪಂ.ಅಧ್ಯಕ್ಷ ಸಂಜು ಕಾಂಬಳೆ, ವಿಜಯ ಕೋಠಿವಾಲೆ, ಎಸ್‌.ಬಿ.ಜಮಾದಾರ, ದಶರಥ ಪವಾರ, ಈರ್ಷಾಧ ಮುಲ್ಲಾ, ಭಾಳು ಮುಗಳಿ ಮುಂತಾದವರು ಉಪಸ್ಥಿತರಿದ್ದರು.ವಿಪ ಸದಸ್ಯ ಮಹಾಂತೇಶ ಕವಟಗಿಮಠಕನ್ನಡಮ್ಮ ಸುದ್ದಿಚಿಕ್ಕೋಡಿ 12: ಜೈನಾಪೂರ ಗ್ರಾಮದ 13 ಹಳ್ಳಿಗಳಿಗೆ ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಪೈಪಗಳನ್ನು ಬದಲಾವಣೆ ಮಾಡಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಒತ್ತಾಯ ಮಾಡಿದರೂ ಸಹ ಕುಡಿಯುವ ನೀರಿನ ಸಮಸ್ಯೆ ಈಡೇರಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.

ಶಾಸಕ ದುರ್ಯೋಧನ ಐಹೋಳೆ ಮಾತನಾಡಿ, ರಾಯಬಾಗ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಯಲ್ಲಿ ನೂರಾರು ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಅಭಿವೃದ್ಧಿಗೆ ಮಾಡಲಾಗಿದೆ. ರೈತರಿಗೆ ಗಂಗಾಕಲ್ಯಾಣ, ರಸ್ತೆ, ಗಟಾರ, ಶೌಚಾಲಯ ಮತ್ತು ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿರುವ ತೃಪ್ತಿ ಇದೆ ಎಂದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಹೇಶ ಭಾತೆ, ನಿಂಗಪ್ಪ ಕುರುಬರ, ಗ್ರಾ.ಪಂ.ಅಧ್ಯಕ್ಷ ಸಂಜು ಕಾಂಬಳೆ, ವಿಜಯ ಕೋಠಿವಾಲೆ, ಎಸ್‌.ಬಿ.ಜಮಾದಾರ, ದಶರಥ ಪವಾರ, ಈರ್ಷಾಧ ಮುಲ್ಲಾ, ಭಾಳು ಮುಗಳಿ ಮುಂತಾದವರು ಉಪಸ್ಥಿತರಿದ್ದರು.

loading...