ಟಿಕೆಟ್‌ ಯಾರಿಗೆ ಎಂಬ ಗೊಂದಲ ಬೇಡ: ಸಚಿವ ಜಿಗಜಿಣಗಿ

0
25
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಟಿಕೆಟ್‌ ಯಾರಿಗೆ ಸಿಗುತ್ತದೆ ಎಂಬ ಗೊಂದಲ ಕಾರ್ಯಕರ್ತರಲ್ಲಿ ಬೇಡ ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್‌ ಕೊಟ್ಟರೂ ಆ ಅಭ್ಯರ್ಥಿಯ ಪರವಾಗಿ ನಾವು ಕೆಲಸ ಮಾಡೋಣ
ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರದ ಕಾಳಿಕಾದೇವಿ ದೇವಾಲಯ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮೋರ್ಚಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಂಖ್ಯೆ ಬಹಳಷ್ಟಿದೆ, ಅವರೆಲ್ಲರನ್ನು ಒಗ್ಗೂಡಿಸುವ ಕಾರ್ಯವಾಗಬೇಕು. ಪ್ರತಿಯೊಂದು ಬೂತ್‌ನಲ್ಲಿ ಕನಿಷ್ಠ ಪಕ್ಷ 4 ರಿಂದ 5 ಹಿಂದುಳಿದ ವರ್ಗದ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ಪಕ್ಷದ ಕಾರ್ಯಗಳಲ್ಲಿ ಜೋಡಿಸುವ ಜವಾಬ್ದಾರಿ ಪಕ್ಷದ ಮುಖಂಡರ ಮೇಲಿದೆ ಎಂದರು. ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಕಾರ್ಯಕ್ಕೆ ಅಣಿಯಾಗಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕಧೊಂಡ, ಶಿವರುದ್ರ ಬಾಗಲಕೊಟ, ಆರ್‌.ಎಸ್‌.ಪಾಟೀಲ ಕುಚಬಾಳ, ರಜನಿ ಸಂಬಣ್ಣಿ, ಮಳುಗೌಡ ಪಾಟೀಲ, ರಾಜು ಬಿರಾದಾರ, ಮೌನೇಶ ಪತ್ತಾರ, ಮೌನೇಶ ಬಡಿಗೇರ, ಛಾಯಾ ಮಶಿಯಣ್ಣವರ, ಸಿದ್ದು ಮಲ್ಲಿಕಾರ್ಜುನಮಠ, ವಿಜು ಶಾಹಪೇಟಿ, ಗುರು ಶಾಹಾಪೇಟ, ಸಂತೋಷ ಯಂಕಪ್ಪಗೋಳ, ಸಂತೋಷ ವಾಘ್ಮೋರೆ, ಚಿದಾನಂದ ಔರಂಗಾಬಾದ, ರಾಜೇಶ ತಾವಸೆ, ಶೀವಾಜಿ ಪಾಟೀಲ, ರಾಹುಲ ಔರಂಗಾಬಾದ, ಪರಶುರಾಮ ಜೋತಿ, ಸಂದೀಪ ಕಾಳೆ, ರಮೇಶ ವಾಘಣ್ಣವರ, ಸದಾಶಿವ ಪೂಜಾರಿ, ಮಲ್ಲು ಮಡಿವಾಳ, ಷಣ್ಮುಖ ಮಡಿವಾಳ, ಸಾಹೇಬಣ್ಣ ಮಡಿವಾಳರ, ಪರಶುರಾಮ ಹೊಸಪೇಟ, ಶ್ರೀಕಾಂತ ಶಿಂಧೆ ಪಾಲ್ಗೊಂಡಿದ್ದರು.

loading...