ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌.

0
23
ಹೆಚ್‌1 ಬಿ ವೀಸಾ ಅವಧಿ ವಿಸ್ತರಣೆ ಮಾಡಲ್ಲವೆಂದು ಈ ಮೊದಲು ಅಮೆರಿಕ ಸರ್ಕಾರ ಹೇಳಿತ್ತು. ಇದರಿಂದ ಭಾರತೀಯರು ಸೇರಿದಂತೆ ಹಲವರು ಗಡಿಪಾರು ಭಯದಲ್ಲಿದ್ದರು. ಅಂತೆಯೇ ಟ್ರಂಪ್ ಸರ್ಕಾರದ ನಿಲುವಿನ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ನಿಲುವು ಸಡಿಲಿಸಿರುವ ಅಮೆರಿಕ ಸರ್ಕಾರ, ಹೆಚ್‌1 ಬಿ ವೀಸಾ ವಿಸ್ತರಣೆಗೆ ಅವಕಾಶ ನೀಡಿದ್ದಲ್ಲದೇ ಗಡಿಪಾರು ಮಾಡುವ ಯಾವುದೇ ಪ್ರಸ್ತಾವ ಇಲ್ಲವೆಂದು ದೃಢಪಡಿಸಿದೆ.

loading...

ಹೆಚ್‌1 ಬಿ ವೀಸಾ ಅವಧಿ ವಿಸ್ತರಿಸಿಕೊಳ್ಳಲು ವೀಸಾ ಹೊಂದಿರುವವರು ಅರ್ಜಿ ಸಲ್ಲಿಸಬಹುದು ಎಂದು ಟ್ರಂಪ್ ಸರ್ಕಾರ ಸೂಚಿಸಿದೆ. ಹೆಚ್‌1 ಬಿ ವೀಸಾ ಹೊಂದಿರುವವರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದರು. ಇದರಿಂದ ಅಮೆರಿಕದಲ್ಲಿದ್ದ ಭಾರತೀಯರು ಆಂತಕಕ್ಕೆ ಒಳಗಾಗಿದ್ದರು. ಆದ್ರೆ ಇದೀಗ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.

loading...