ತಂದೆ-ತಾಯಿಗಳನ್ನು ವೃದ್ಯಾಪದಲ್ಲಿ ಗೌರವದಿಂದ ನೋಡಿಕೊಳ್ಳಬೇಕು: ಲಾವಂಡೆ

0
22
loading...

ಕನ್ನಡಮ್ಮ ಸುದ್ದಿ-ಶಿರಸಿ: ಮಾನವನ ಬದುಕು ಜೀವಂತಿಕೆಯನ್ನು ಪಡೆಯಬೇಕಾದರೆ ತ್ಯಾಗ-ಸೇವೆಯ ಮೂಲಕ ತೊಡಗಿಸಿಕೊಳ್ಳಬೇಕು ಎಂದು ಲಯನ್ಸ ಜಿಲ್ಲೆ 317(ಬಿ) ಜಿಲ್ಲಾ ಪ್ರಾಂತಪಾಲ ಎಂ.ಜೆ.ಎಫ್‌. ಲಯನ್ಸ್‌ ಇಂಜಿನಿಯರ್‌ ಸಾಯಿಶ್‌ ಲಾವಂಡೆ ಹೇಳಿದರು.
ಶಿರಸಿ ಲಯನ್ಸ್‌ ಕ್ಲಬ್‌ಗೆ ಭೇಟಿ ನೀಡಿದ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ತಂದೆ-ತಾಯಿಗಳನ್ನು ವೃದ್ಯಾಪದಲ್ಲಿ ಗೌರವದಿಂದ ಹಾಗೂ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಲಯನೆಸ್‌ ಕ್ಲಬ್‌ ಲಯನೆಸ್‌ ಶಾಲೆಯ ಚಿಣ್ಣರ್‌ ಪಾರ್ಕ ನಿರ್ಮಾಣಕ್ಕಾಗಿ 2.80 ಲಕ್ಷ ರೂ. ಚೆಕ್ಕನ್ನು ಲಯನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗೆ ನೀಡಲಾಯಿತು. ನೆಮ್ಮದಿ ರುದ್ರಭೂಮಿಯ ಸ್ವಚ್ಛತೆಗಾಗಿ ಶಿರಸಿ ಲಯನ್ಸ ಕ್ಲಬ್‌ 50 ಸಾವಿರ ರೂ. ಚೆಕ್ಕನ್ನು ಪಿ.ಪಿ ಹೆಗಡೆ ವೈಶಾಲಿಯವರಿಗೆ ನೀಡಲಾಯಿತು. ಯಲ್ಲಾಪುರ ರಸ್ತೆಯ ಲಯನ್ಸ್‌ ಶಾಲೆಯ ಅಡ್ಡರಸ್ತೆಯಲ್ಲಿ ಸುಂದರವಾಗಿ ನಿರ್ಮಾಣಗೊಂಡ ಲಯನ್ಸ್‌ ಶಾಲೆಯ ಸ್ವಾಗತ ಕಮಾನನ್ನು ಹಿರಿಯ ಲಯನ್ಸ್‌ ಸದಸ್ಯ ಜಿ.ಎಸ್‌.ಹೆಗಡೆ ಬಸವನಕಟ್ಟೆ ಜೊತೆಸೇರಿ ಉದ್ಘಾಟಿಸಲಾಯಿತು.
ಲಯನ್ಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಯನ್‌ ತ್ರಿವಿಕ್ರಮ ಪಟವರ್ಧನ್‌, ಶಶಿನಂದ ಮಾಸುರಕರ ಹಾಗೂ ಇತರರು ಇದ್ದರು. ಲಯನ್ಸ ಕ್ಲಬ್‌ ಅಧ್ಯಕ್ಷೆ ಜ್ಯೋತಿ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿನಯ ಹೆಗಡೆ ಹಾಗೂ ಜ್ಯೋತಿ ಹೆಗಡೆ ವರದಿ ವಾಚಿಸಿದರು. ರಮಾ ಪಟವರ್ಧನ್‌ ಅಥಿತಿಗಳನ್ನು ಪರಿಚಯಿಸಿದರು. ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಲಯನ್‌ ಪ್ರದೀಪ ಯಲ್ಲನಕರ್‌ ವಂದಿಸಿದರು.

loading...