ತಪ್ಪಿದಸ್ತರನ್ನು ಶೀಘ್ರ ಬಂಧಿಸುವಂತೆ ಮನವಿ

0
18
loading...

ಕುಮಟಾ: ಹೊನ್ನಾವರದ ಪರೇಶ ಮೇಸ್ತಾನ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಒಂದು ತಿಂಗಳು ಸಮೀಪಿಸಿದರೂ ಈವರೆಗೂ ತನಿಖೆಯಲ್ಲಿ ಯಾವುದೆ ಪ್ರಗತಿಯಾಗಿಲ್ಲ. ಹಾಗಾಗಿ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ ತಪ್ಪಿದಸ್ತರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಆಮ್‌ ಆದ್ಮಿ ಪಾರ್ಟಿಯ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ ಮೇಘರಾಜ ನಾಯ್ಕ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮರೇಶ ಮೇಸ್ತಾನ ಸಾವು ಇಡೀ ಜಿಲ್ಲೆಯಲ್ಲೆ ಅಶಾಂತಿ ಮೂಡುವಂತಾಗಿತ್ತು. ಈ ಪ್ರಕರಣವನ್ನು ತನಿಖೆ ಮಾಡುವಲ್ಲಿ ವಿಫಲವಾದ ಸರ್ಕಾರ, ಸಿಬಿಐಗೆ ಒಪ್ಪಿಸಿದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಒಂದು ತಿಂಗಳು ಸಮೀಪಿಸುತ್ತ ಬಂದರೂ, ತನಿಖೆಯಲ್ಲಿ ಯಾವುದೆ ಪ್ರಗತಿಯಾಗಿಲ್ಲ. ಈ ಪ್ರಕರಣವನ್ನು ಅಧಿಕಾರಿಗಳು ನಿರ್ಲಕ್ಷೃ ವಹಿಸಿದರೆ, ಉಗ್ರ ಹೋರಾಟ ಮಾಡುವುದಾಗಿ ನೀಡಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆಯಲ್ಲಿ ಆಮ್‌ ಆದ್ಮಿ ಪಾರ್ಟಿಯ ತಾಲೂಕಾಧ್ಯಕ್ಷ ನಾಗರಾಜ ಶೇಟ್‌, ಪ್ರಮುಖರಾದ ಶೈಲೇಶ ನಾಯ್ಕ, ಸೈಯ್ಯದ್‌ ಇಸೂಬ್‌, ಗಣಪತಿ ಶೇಟ್‌, ಉಮಾಕಾಂತ ನಾಯ್ಕ, ಲಕ್ಷ್ಮಣ ಅಂಬಿಗ, ಕೇಶವ ಹಳಕಾರ, ಸಿದ್ಧು ಶಾನಭಾಗ ಹಾಗೂ ಮೊದಲಾದವರು ಉಪಸ್ಥಿತಿರಿದ್ದರು.

loading...