ತಾಲೂಕು ರಚನೆ ವಿಳಂಬ ಸಹಿಸುವುದಿಲ್ಲ: ಮುತ್ತಪ್ಪ

0
16
loading...

ಕನ್ನಡಮ್ಮ ಸುದ್ದಿ-ತೇರದಾಳ: ತಾಲೂಕು ರಚನೆಯಲ್ಲಿ ಸರಕಾರ ವಿಳಂಬ ಮತ್ತು ಅನ್ಯಾಯ ಮಾಡಿದರೆ ನಾವು ಯಾವತ್ತು ಸಹಿಸುವುದಿಲ್ಲ ಎಂದು ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಮಂಗಳವಾರ ಮತ್ತೆ ಬೇಟಿ ನೀಡಿ ಮಾತನಾಡಿದರು.
ಹೋರಾಟಕ್ಕೆ ಬ್ರಿಟಿಷರೇ ನಲುಗಿ ಹೋಗಿ ದೇಶವನ್ನು ಬಿಟ್ಟು ಹೋಗಿದ್ದಾರೆ. ಇನ್ನು ನಮ್ಮಿಂದ ಆಯ್ಕೆಗೊಂಡ ಸರಕಾರ ಯಾವ ಲೆಕ್ಕ ಎಂದು ಕಟುವಾಗಿ ಟೀಕಿಸಿದರು. ತೇರದಾಳ ತಾಲೂಕು ಬೇಡಿಕೆ ಅರ್ಹ ಮತ್ತು ಯೋಗ್ಯವಾಗಿದೆ. ಆದರೆ ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಹೋರಾಟಕ್ಕೆ ಜಯ ಸಿಕ್ಕೆ ಸಿಗುತ್ತದೆ. ಆದ್ದರಿಂದ ತೇರದಾಳ ತಾಲೂಕು ಆಗುವವರೆಗೆ ಹೋರಾಟದಿಂದ ಹಿಂದೆ ಸರಿಯಬೇಡಿ. ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಮತ್ತು ಜಿಪಂ ವತಿಯಿಂದ ಸರಕಾರಕ್ಕೆ ಯಾವ ರೀತಿ ವರದಿ ಸಲ್ಲಿಸಬೇಕು ಅದೇ ರೀತಿ ಸಲ್ಲಿಸಲಾಗುವುದು ಎಂದು ಹೇಳಿದರು.
ಹೋರಾಟ ಸಮಿತಿ ಸದಸ್ಯರು, ಮುಖಂಡರು ಇದ್ದರು.

loading...