ದಲಿತ ಯುವಕನ ಮೇಲೆ ಹಲ್ಲೇ; ಕೋಲೆ ಯತ್ನ

0
7
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಅಂಬೇಡ್ಕರ ನಗರದ ದುರುಗೇಶ ಎಂಬ ದಲಿತ ಯುವಕನ ಮೇಲೆ ದುಷ್ಕರ್ಮಿಗಳ ತಂಡ ಗುರುವಾರ ರಾತ್ರಿ ಚಾಕುವಿನಿಂದ ಮನಬಂದಂತೆ ಮಾರಣಾಂತಿಕ ಹಲ್ಲೇ ಮಾಡಿ ಪರಾರಿಯಾದ ಘಟನೆ ನಡೆದಿದೆ. ಗಾಯಗೊಂಡಿರುವ ದಲಿತ ಯುವಕನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪ: ಜೆಸ್ಕಾಂ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಕ್ಬರ್‌ಖಾನ್‌, ಅರ್ಬಾಹ್‌ ಖಾನ್‌, ಸರ್ದಾರ ಖಾನ್‌ ಎಂಬುವವರು ದಾಳಿ ಮಾಡಿ ಕೊಲೆಗೆ ಪ್ರಯತ್ನಿಸಿದ್ದಾರೆ ಎಂದು ದಾಳಿಗೊಳಗಾಗಿರುವ ದುರುಗೇಶ ಆರೋಪಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

loading...