ದಲಿತ ಸಂಘಟನೆಯಿಂದ ಸಚಿವ ಅನಂತಕುಮಾರಗೆ ಘೇರಾವ್‌

0
23
loading...

ಕನ್ನಡಮ್ಮ ಸುದ್ದಿ-ಗೋಕಾಕ: ಗೋಕಾಕ ವಿಧಾನ ಸಭಾ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಗೆ ಆಗಮಿಸಲಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ವಾಹನಕ್ಕೆ ಅಡ್ಡಗಟ್ಟಿ ಕಪ್ಪು ಪಟ್ಟಿ ಧರಿಸಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಲೇತ್ನಿಸಿದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಬಿಡುಗಡೆ ಮಾಡಿದ ಘಟನೆ ಭಾನುವಾರ ನಡೆದಿದೆ.
ಸಂವಿಧಾನ ತಿದ್ದುಪಡಿ ಮಾಡುವ ಮತ್ತು ಮಾಡಲು ಬಂದಿರುವದಾಗಿ ಹೇಳಿಕೆ ನೀಡಿರುವ ಹಿನ್ನಲೆ, ನಗರದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮುನ್ನವೇ ಹೆಚ್ಚುವರಿ ಪೋಲಿಸ್‌ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಅವರ ನೇತೃತ್ವದಲ್ಲಿ ಪೋಲಿಸ್‌ ಸಿಬ್ಬಂಧಿಯವರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಸಂವಿಧಾನ ತಿದ್ದುಪಡಿ ಮಾಡುವದಾಗಿ ಹೇಳಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಪುಟದಿಂದ ಕೈ ಬಿಡಬೇಕು ಮತ್ತು ಸಚಿವ ಅನಂತಕುಮಾರ ವಿರುದ್ಧ ಪೋಲಿಸ್‌ ಇಲಾಖೆ ಸ್ವಯಂ ದೂರು ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸತ್ಯೆಪ್ಪ ಕರವಾಡಿ, ಜಿಲ್ಲಾ ಸಂಚಾಲಕ ರಮೇಶ ಮಾದರ, ತಾಲೂಕ ಸಂಚಾಲಕರಾದ ಲಕ್ಷ್ಮಣ ತೆಳಗಡೆ, ಬಾಳೇಶ ಸಂತವ್ವಗೋಳ, ಅಲ್ಲಾಭಕ್ಷ ಮುಲ್ಲಾ, ದುರ್ಗಪ್ಪ ಮೇತ್ರಿ, ದೊಡ್ಡವ್ವ ತೇಳಗೇರಿ, ಬಬಲೆಪ್ಪ ಮಾದರ, ವಿಠ್ಠಲ ಸಣ್ಣಕ್ಕಿ, ಕಾಡಪ್ಪ ಮೇಸ್ತ್ರಿ, ಪರಸಪ್ಪ ತೆಳಗಡೆ, ಕಾಡಪ್ಪ ತೆಳಗೇರಿ, ಲಕ್ಷ್ಮಣ ಕರಬನ್ನವರ, ವಸಂತ ಕಾಥೆನ್ನವರ, ಸುಂದರ ಹವಳೆವ್ವಗೋಳ, ಶಂಕರ ಖಿಲಾರಿ, ಅಶೋಕ ಮೂಡಲಗಿ, ಮಾರುತಿ ಕರಬನ್ನವರ, ಯಲ್ಲಪ್ಪ ಹರಿಜನ, ಉಮೇಶ ಹರಿಜನ, ಬಲವಂತ ತಳವಾರ, ಮಾರುತಿ ಹರಿಜನ, ಶಿವಾಜಿ ಹರಿಜನ, ತಾಜುದ್ದಿನ ಶಿರಹಟ್ಟಿ ಸೇರಿದಂತೆ ನೂರಾರು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಇದ್ದರು.

loading...