ನರೇಂದ್ರ ಮೋದಿಯೊಬ್ಬ ಹಿಟ್ಲರ್: ಬಸವನಗೌಡ

0
21
loading...

ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್‍ನ ಯುವ ದೃಷ್ಠಿ ಸಮಾವೇಶದಲ್ಲಿ ಹೇಳಿಕೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ನಾಗರಿಕನ ಖಾತೆಗೆ 15ಲಕ್ಷ ರೂ. ಹಣ ಹಾಕಲಾಗುತ್ತದೆ. ಭಾರತ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೆನೆ ಎಂಬ ಭರವಸೆ ನೀಡಿದ್ದರು. ನರೇಂದ್ರ ಮೋದಿಯೊಬ್ಬ ಹಿಟ್ಲರ್ ಎಂದು ಯುತ್ ಕಮೀಟಿಯ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ವಾಗ್ದಾಳಿ ನಡೆಸಿದರು.

ಅವರು ಶನಿವಾರ ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಯುವ ದೃಷ್ಠಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ. ಒಬ್ಬ ಯುವ ನಾಯಕನಾಗಿ ಬೆಳೆಯಲು, ಮೊದಲು ಪಕ್ಷಕ್ಕಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ನಾನು ಸಹ ಯುತ್ ಕಮಿಟಿಯ ಅಧ್ಯಕ್ಷನಾಗಿ ಈಗ ರಾಜ್ಯಾಧ್ಯಕ್ಷನಾಗಿದ್ದೆನೆ ಯುವಕರಿಗೆ ಉತ್ಸಾಹದ ಮಾತುಗಳನ್ನಾಡಿದರು.

ಕರ್ನಾಟಕ ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 4 ವರ್ಷ 8 ತಿಂಗಳ ಒಂದು ಭ್ರಷ್ಟಾಚಾರ ಆರೋಪಗಳಿಲ್ಲದೆ ಆಡಳಿತ ನಡೆಸಿದ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ಜಾತಿ ಭೇದ ಭಾವವಿಲ್ಲದೆ ನಾವೇಲ್ಲರೂ ಒಂದು ಎಂಬ ನಿಟ್ಟಿನಲ್ಲಿ ಆಡಳಿತ ನಡೆಸಲಾಗುತ್ತಿದೆ. ಆದರೆ ಬಿಜೆಪಿಯವರು ನಾಚಿಕೆ ಇಲ್ಲದವರು ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತು ಕೆಲಸ ಮಾಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಹಾಗೂ ಪರಮೇಶ್ವರ  ನೇತೃತ್ವದಲ್ಲಿ 2018ರಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದು ಭರವಸೆಯ ಮಾತುಗಳನ್ನಾಡಿದರು.

ನಂತರ ಕಾಂಗ್ರೆಸ್ ರಾಜ್ಯ ಮಹಿಳಾಧ್ಯಕ್ಷೆ ಲಕ್ಷ್ಮೀ ಹೆಬಾಳ್ಕರ ಮಾತನಾಡಿ. ಬಿಜೆಪಿಯವರು ಕಾಂಗ್ರೆಸ್ ಸರ್ಕಾರ 70ವರ್ಷ ಆಳ್ವಿಕೆ ನಡೆಸಿ ಏನು ಮಾಡಿದೆ ಎಂದು ಪ್ರಶ್ನೀಸುತ್ತಿದ್ದಾರೆ. ಅವರಿಗೋತ್ತಿಲ್ಲ ಇಂದು ಅವರು ನಮಗೆ ಪ್ರಶ್ನೀಸುವತ್ತಿದ್ದಾರೆಂದರೆ ಆ ಹಕ್ಕನ್ನು ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.

ವಿಧಾನಸಭೆ ಚುನಾವಣೆಗೆ ಇನ್ನೂ ಕೇವಲ 70 ದಿನಗಳು ಮಾತ್ರ ಬಾಕಿ ಇದೆ. ವಿಧಾನ ಸಭೆಯಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಬೇಕು. ಯುವಕರು ಜಾಗೃತಿ ವಹಿಸಿ ಚುನಾವಣೆ ತಯಾರಿ ನಡೆಸಬೇಕಾಗಿದೆ ಎಂದು ಹೇಳದರು.

ಈ ಸಂದರ್ಭದಲ್ಲಿ ಎಂ.ಡಿ ಲಕ್ಷ್ಮೀ ನಾರಾಯಣ, ಯುತ್ ಕಾಂಗ್ರೆಸ್ ಇನ್ ಚಾರ್ಜ ಹರೀಶ ಪವಾರ, ಮದನ ಕುಲಕರ್ಣಿ, ರಾಘವೇಂದ್ರ ಪ್ರಸಾದ, ಪ್ರವೀಣ ಪಾಟೀಲ, ಶಿವನಗೌಡ ಪಾಟೀಲ, ನೂರ್ ಅಹ್ಮದ್, ಕುಶಾಲ ದೇಸಾಯಿ, ಸೇರಿದಂತೆ ಯುತ್ ಕಾಂಗ್ರೆಸ್ನ ಕಾರ್ಯಕರ್ತರು ಇದ್ದರು.

 

ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ ಎಂದು ಬಿಜೆಪಿ ನಾಯಕರುಗಳು ಸುಳ್ಳು ಹೇಳುವ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಮೋದಿ ಅವರ ಕೈಯಿಂದ ಚಹಾ ಕುಡಿದ ವ್ಯಕ್ತಿಯನ್ನು ಹುಡುಕಿಕೊಟ್ಟರೆ ಒಂದು ಲಕ್ಷ ರುಪಾಯಿ ಬಹುಮಾನ ಕೊಡುವುದಾಗಿ ಸವಾಲು ಎಸೆದರು.

ಹರೀಶ ಪವಾರ

ಯುವ ಕಾಂಗ್ರೆಸ್ ಘಟಕದ ರಾಜ್ಯ ಉಸ್ತುವಾರಿ

loading...