ನಾಟಕ ನಗೆಹಬ್ಬ ವಿಕ್ಷೀಸುವ ಹವ್ಯಾಸ ಬೆಳೆಸಿಕೊಳ್ಳಿ: ಶ್ರೀಗಳು

0
28
loading...

ನಿಪ್ಪಾಣಿ: ನಗೆ ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಸವಿದ ಪ್ರೇಕ್ಷಕರು ಜ್ಯೋತಿಪ್ರಸಾದ ಜೊಲ್ಲೆಯವರ ಅತೀ ಸರಳ ಸಜ್ಜನಿಕೆ, ನಡೆ ನುಡಿಯಲ್ಲಿ ಸೂಕ್ಷ್ಮ ರೀತಿಯಲ್ಲಿ ಸ್ಪಂದಿಸುವ ಮುಗ್ಧತೆಯಿಂದ ಕಾರ್ಯಚಟುವಟಿಕೆಯಲ್ಲಿ ನಿರತರಾಗುವ ವ್ಯಕ್ತಿತ್ವ ನಿಜಕ್ಕೂ ಶ್ಲಾಘನೀಯ. ಅವರಲ್ಲಿರುವ ಪ್ರತಿಭೆ ಸಾಮಾಜಿಕ ಕಾಳಜಿ ಪ್ರತಿಯೊಂದು ಕಾರ್ಯದಲ್ಲಿರುವ ಉತ್ಸಾಹ ಜೊಲ್ಲೆ ಉದ್ಯೋಗ ಸಮೂಹಕ್ಕಷ್ಟೇ ಅಲ್ಲದೇ ಇಡೀ ಸಮಾಜಕ್ಕೆ ಪ್ರೇರಣಾದಾಯಿಯಗಿದ್ದಾರೆ ಎಂದು ಹುಕ್ಕೇರಿಯ ಪ.ಪೂ. ಶ್ರೀ. ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜೀ ಆಶೀರ್ವಚನ ನೀಡಿದರು.
ಸಮೀಪದ ನಾಂಗನೂರಿನ ಶಿವಶಂಕರ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹದ ಆಯೋಜಿಸಲಾದ 2 ನೇ ವರ್ಷದ ಪ್ರೇರಣಾ ಉತ್ಸವದ ಅಂಗವಾಗಿ ಆಯೋಜಿಸಲಾದ ನಗೆ ಹಬ್ಬ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಂಗಾವತಿಯ ಪ್ರಾಣೇಶ ಅವರನ್ನೊಲಗೊಂಡ ತಮಡದಲ್ಲಿ ಆನಂದ ಮಾಮನಿ, ಅಜಯ ಸಾರಾಪೂರೆ ಪಾಲ್ಗೊಂಡಿದ್ದರು ಹಾಗೂ ಬೇಂಗಳೂರಿನ ಶ್ರೀನಿವಾಸ್‌ ಕಲಾ ತಂಡದಿಂದ ಸುಮಾರು 20 ಜನ ಕಲಾಕಾರರು ಸಾಂಸ್ಕೃತಿಕ ಕಾಯಕ್ರಮದಲ್ಲಿ ಪಾಲ್ಗೊಂಡು ನೃತ್ಯ ಕಲೆಯನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಕೆಒಎಫ್‌ ನ ಉಪಾದ್ಯಕ್ಷರಾದ ಪಿ.ಟಿ. ಬೆನಕಟ್ಟಿ, ಹನುಮಮತರಾಯ, ರಾಮನಗೌಡ, ರಾಮಾನುಜ ರೆಡ್ಡಿ, ಸಿ. ಭರಮಪ್ಪ, ಬಿ.ಕೆ.ತೇಲಿ, ಡಿ. ಅಲಗೌಡ, ಶಿವಗೌಡ ಪಾಟೀಲ, ಗುಡಿಹಾಳ, ಬಿ.ಆರ್‌ ಪಾಟೀಲ, ಮಹಾಲಿಂಗ ಕೋಠಿವಾಲೆ, ಸುರೇಶ ಶೆಟ್ಟಿ, ಅನಿಲ ನೆಷ್ಡೆ, ರವಿ ಕೋಠಿವಾಲೆ, ವಜ್ರಕಾಂತ ಸದಲಗೆ, ಗಜಾನನ ಗಡ್ಕರಿ, ಬಾಲೆ ಬಹಲ್ದಾರ, ಹರೀಶ್‌ ಶಾಂಡಗೆ, ಸುರೇಶ ಬಾಡಕರ, ಜಯವಂತ ಭಾಟಲೆ, ಸಂಜಯ ಶಿಂತ್ರೆ, ನಗರಸೇವಕರು, ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕುದ್ರೋಳಿ ನಿರೂಪಿಸಿ ವಂದಿಸಿದರು.

loading...