ನಿಪ್ಪಾಣಿಯಲ್ಲಿ ಕಾಂಗ್ರೆಸ್‌ ಗೆಲುವು: ರಮೇಶ ಜಾರಕಿಹೊಳಿ

0
36
loading...

ನಿಪ್ಪಾಣಿ 07: ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್‌ ಸರಕಾರವು ಅತಿ ಹೆಚ್ಚಿನ ಜನಪ್ರಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು,ನಿಪ್ಪಾಣಿ ಮತಕ್ಷೇತ್ರದಲ್ಲಿಯೂ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ನೇತೃತ್ವದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳು ನಡೆದಿದ್ದು,ಕಾಂಗ್ರೆಸ್‌ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಎಷ್ಟೇ ಖೊಟ್ಟಿ ಪ್ರಚಾರ ನಡೆಸಿದರೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರಕಾರವೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ.ಕಳೆದ ಬಾರಿ ನಮ್ಮಲ್ಲಿಯ ಭಿನಾಭಿಪ್ರಾಯದಿಂದಾಗಿ ನಿಪ್ಪಾಣಿ ಕ್ಷೇತ್ರ ಕಾಂಗ್ರೆಸ್‌ ಕೈ ತಪ್ಪಿತು. ಆದರೆ ಈ ಬಾರಿ ನಮ್ಮೆಲ್ಲರ ಒಮ್ಮತದಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ.ಬಿಜೆಪಿ ಎಷ್ಟೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಬಗ್ಗೆ ತೋರಿಸಿಕೊಂಡರೂ ಜನತೆಯೇ ಅವರಿಗೆ ಸರಿಯಾದ ಸ್ಥಾನ ತೋರಿಸಲಿದ್ದಾರೆ.ಗೋಕಾಕದಂತೆ ನಿಪ್ಪಾಣಿಯಲ್ಲಿಯೂ ಕೂಡ ಅಂಡರ್‌ಗ್ರೌಂಡ್‌ ವಿದ್ಯುತ್‌ ಕೇಬಲ್‌ ಅಳವಡಿಸುವ ಕುರಿತು ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಕಾಕಾಸಾಹೇಬ ಪಾಟೀಲ ಅವರೊಂದಿಗೆ ಭೇಟಿ ಮಾಡಿ ಪ್ರಸ್ತಾವಣೆ ಸಲ್ಲಿಸಲಾಗಿದೆ.ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ.ಕಾಂಗ್ರೆಸ್‌ ಮಾಡಿದ ಅಭಿವೃದ್ಧಿ ಕಾರ್ಯಗಳ ಶ್ರೇಯಸ್ಸು ಪಡೆದುಕೊಳ್ಳ್ಳುವ ವ್ಯರ್ಥ ಪ್ರಯತ್ನ ಬಿಜೆಪಿ ಮಾಡುತ್ತಿದೆ.ಉಜ್ವಲಾ ಯೋಜನೆಯಡಿ ಸಿಲೆಂಡರ್‌ ವಿತರಿಸುವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ವೇದಿಕೆಯಲ್ಲಿರುವುದು ತಪ್ಪು.ನಿಪ್ಪಾಣಿ ತಾಲೂಕು ಆಗುವುದು ಖಚಿತ. ವಿಶೇಷ ಅನುದಾನ ದೊರಕಿಸುವಲ್ಲಿ ತಾವು ಬದ್ಧರಾಗಿದ್ದೇವೆ. ಸ್ಥಳೀಯ ಮುಖಂಡರೊಂದಿಗೆ ಶೀಘ್ರದಲ್ಲಿಯೇ ಸಿಎಂ ಅವರನ್ನು ಭೇಟಿ ಆಗಲಿದ್ದೇವೆ.ನಿಪ್ಪಾಣಿ ಕ್ಷೇತ್ರದಲ್ಲಿ ಸ್ವಸಹಾಯ ಉಳಿತಾಯ ಸಂಘಗಳ ಹೆಸರಿನಡಿ ನಾಗರೀಕರನ್ನು ಲೂಟಿ ಮಾಡುತ್ತಿರುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ,ಸುಭಾಷ ಜೋಶಿ,ಲಕ್ಷ್ಮಣರಾವ ಚಿಂಗಳೆ,ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ,ಉಪಾಧ್ಯಕ್ಷ ಸುನೀಲ ಪಾಟೀಲ,ಬಾಳಾಸಾಹೇಬ ದೇಸಾಯಿ,ಪ್ರದೀಪ ಜಾಧವ,ಜಿ.ಫಮ.ಸದಸ್ಯ ರಾಜೇಂದ್ರ ವಡ್ಡರ,ಅಶೋಕಕುಮಾರ ಅಸೋದೆ,ಉತ್ತಮ ಪಾಟೀಲ,ಪಂಕಜ ಪಾಟೀಲ,ಸುಜಯ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಬಳಿಕ ಮತಕ್ಷೇತ್ರದ ನಾನಾ ಗ್ರಾಮಗಳ ಕಾರ್ಯಕರ್ತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

loading...