ನಿಲ್ದಾಣದಲ್ಲಿ ನಿಂತಿದ್ದ ಮೆಮು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ

0
30
loading...

ಪಾಟ್ನಾ – ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಪಾಟ್ನಾ – ಮೊಕಾಮಾ ನಡುವೆ ಸಂಚರಿಸುವ ಮೆಮು ರೈಲಿನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಪಾಟ್ನಾ – ಮೊಕಾಮಾ ರೈಲು ರಾತ್ರಿ 11 ಗಂಟೆಗೆ ಮೊಕಾಮಾ ನಿಲ್ದಾಣಕ್ಕೆ ತಲುಪಿತ್ತು. ರೈಲು ನಿಲ್ದಾಣದಲ್ಲಿ ನಿಂತಿದ್ದಾಗ ತಡರಾತ್ರಿ ವೇಳೆಯಲ್ಲಿ 2 ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸಿಸಿದ ಕ್ಷಣಾರ್ಧದಲ್ಲಿ ಮತ್ತೆರೆಡು ಬೋಗಿಗಳಿಗೆ ಬೆಂಕಿ ಆವರಿಸಿಕೊಂಡಿದೆ ಎಂದು ವರದಿಯಾಗಿದೆ.
ಸಮಯಕ್ಕೆ ಸರಿಯಾಗಿ ಬೆಂಕಿ ಆರಿಸಿದ್ದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬೆಂಕಿ ಆಕಸ್ಮಿಕ್ಕೆ ನಿರ್ಧಿಷ್ಠ ಕಾರಣಗಳು ತಿಳಿದು ಬಂದಿಲ್ಲ.

loading...