ನಿವೇದಿತಾ ಇಂದಿನ ಮಹಿಳಾ ವರ್ಗಕ್ಕೆ ಆದರ್ಶವಾಗಿದ್ದಾರೆ: ಭಟ್ಟ

0
30
loading...

ಕನ್ನಡಮ್ಮ ಸುದ್ದಿ-ಶಿರಸಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಸಹೋದರಿ ನಿವೇದಿತಾ ಅವರ 50ನೇ ಜಯಂತ್ಯುತ್ಸವದ ಪ್ರಯುಕ್ತ ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಗರ ರಾಘವೇಂದ್ರ ಕಲ್ಯಾಣ ಮಂಟಪದವರಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
ನೂರಾರು ಎಬಿವಿಪಿ ಕಾರ್ಯಕರ್ತರು ಕೇಸರಿ ಧ್ವಜ ಹಿಡಿದು ಭಾರತ ಮಾತೆಗೆ ಜೈಕಾರ ಹಾಕಿದರು. ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೇರಿದ ಕಾರ್ಯಕರ್ತರು ಸಬಲ ಶಕ್ತಿ ಸಮಾವೇಶ ನಡೆಸಿ, ವಿದ್ಯಾರ್ಥಿ ಶಕ್ತಿ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸಹೋದರಿ ನಿವೇದಿತಾ ಅವರ ಕುರಿತು ಎಬಿವಿಪಿ ಹಿರಿಯ ವಕ್ತಾರ ಶ್ರೀಧರ್‌ ಭಟ್ಟ ಉಪನ್ಯಾಸ ನೀಡಿ, ಸ್ವಾಮಿ ವಿವೇಕಾನಂದರ ರಾಷ್ಟ್ರ ಪುನರ್‌ ನಿರ್ಮಾಣ ಹಾಗೂ ಬಲಿಷ್ಠ ದೇಶ ನಿರ್ಮಾಣದ ಕನಸನ್ನು ಬೆಂಬಲಿಸಿ ಪಾಶ್ಚಾತ್ಯ ಸಂಸ್ಕೃತಿ ತೊರೆದು ಭಾರತಕ್ಕೆ ಬಂದ ನಿವೇದಿತಾ ನಮಗೆಲ್ಲ ಪ್ರೇರಣೆಯಾಗಿದ್ದಾರೆ. ದೇಶದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಇಡೀ ಜಗತ್ತಿಗೆ ಹೇಳಿದ ನಿವೇದಿತಾ ಸಾಮಾನ್ಯ ಮಹಿಳೆಯೊಬ್ಬಳು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ. ಭಗಿನಿ ನಿವೇದಿತಾ ಇಂದಿನ ಸಮಾಜದ ಮಹಿಳಾ ವರ್ಗಕ್ಕೆ ಆದರ್ಶವಾಗಿದ್ದಾರೆ ಎಂದರು.
ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ, ಭಾಷಣ ಸ್ಪರ್ಧೆಂiÀiಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಎಬಿವಿಪಿ ಪ್ರಮುಖ ಸಿದ್ದು ಮದರಂಗಡಿ, ಪ್ರಮುಖರಾದ ರಮಾ ಪಟವರ್ಧನ, ಶುಭಾ ಗೌಡ ಹಾಗೂ ಇತರರು ಇದ್ದರು.

loading...