ನೂತನ ಡಿಸಿಪಿ ಮಹಾನಿಂಗಗೆ ಸನ್ಮಾನ

0
19
loading...

ಕನ್ನಡಮ್ಮ ಸುದ್ದಿ-ಗೋಕಾಕ: ನಗರ ಪೊಲೀಸ್‌ ಇಲಾಖೆಯ ಅಪರಾಧ ಸಂಚಾರ ವಿಭಾಗದ ನೂತನ ಡಿಸಿಪಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಮಹಾನಿಂಗ ನಂದಗಾಂವಿ ಅವರ ಗೆಳೆಯರು ಸತ್ಕರಿಸಿ ಗೌರವಿಸಿದರು.
ಬೆಳಗಾವಿ ಅವರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಹಗಲಿರುಳೆನ್ನದೇ ಶ್ರಮವಹಿಸಿ ಅತ್ಯಂತ ಬಡತನದಲ್ಲಿ ಕಲಿತ ಉನ್ನತ ಹುದ್ದೆಗೇರಿರುವ ಎಂ.ಬಿ. ನಂದಗಾಂವಿ ಅವರ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಾಧಿಕ್‌ ಹಲ್ಯಾಳ, ಬಸವರಾಜ ದೇಶನೂರ, ಎ.ಕೆ. ದೇಸಾಯಿ, ಮುಗುಟ ಪೈಲವಾನ, ಈ.ಬಿ. ನೇರ್ಲಿ ಉಪಸ್ಥಿತರಿದ್ದರು.

loading...