ನೂತನ ಪಿಂಚಣಿ ವ್ಯವಸ್ಥೆಯಿಂದ ನೌಕರರ ಭವಿಷ್ಯ ಅಭದ್ರ

0
16
loading...

ಕನ್ನಡಮ್ಮ ಸುದ್ದಿ-ರೋಣ: ನೂತನ ಪಿಂಚಣಿ ವ್ಯವಸ್ಥೆಯಿಂದ ಸರ್ಕಾರಿ ನೌಕರ ಪಿಂಚಣಿ ಪಡೆಯಲು ಹರಸಾಹಸ ಪಡುವಂತಹ ಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡಿವೆ ಎಂದು ಎನ್‌ಪಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ ಆರೋಪಿಸಿದರು.
ಪಟ್ಟಣದ ಗುರುಭವನದಲ್ಲಿ ಎನ್‌ಪಿಎಸ್‌ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ ತಾಲೂಕ ಮಟ್ಟದ ವಿಚಾರ ಸಂಕೀರ್ಣ ಹಾಗೂ ನೂತನ ಪಿಂಚಣಿ ಯೋಜನೆಯ ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಷೇರು ಮಾರುಕಟ್ಟೆ ಮೇಲೆ ಇಂದಿನ ನೌಕರರ ಭವಿಷ್ಯವನ್ನು ನಿರ್ಮಾಣ ಮಾಡಲಾಗಿರುವುದು ವಿಷಾದನೀಯ. ನೂತನ ಪಿಂಚಣಿಯ ವ್ಯವಸ್ಥೆಯಿಂದ ಕುಟುಂಬ ನಿರ್ವಹಣೆಯೇ ಕಷ್ಟಕರವಾಗಿದೆ, ಮಕ್ಕಳ ವ್ಯಾಸಾಂಗ,ಆರೋಗ್ಯ ಹಾಗೂ ಕುಟುಂಬದ ಆಗುಹೋಗುಗಳನ್ನು ನಿಭಾಯಿಸುವದೇ ಕಷ್ಟ. ಈ ಯನ್ನು ಕೈ ಬಿಡಬೇಕು. ಅದರಂತೆ ಎನ್‌ಪಿಎಸ್‌ ನೌಕರರಿಗೆ ಭದ್ರತೆಯನ್ನು ನೀಡಬೇಕು ಎಂದರು.
ಶಾಸಕ ಜಿ.ಎಸ್‌.ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸರ್ಕಾರಿ ನೌಕರ ತಮ್ಮದೇ ಆದ ಕಷ್ಟಗಳನ್ನು ಪಡುತ್ತಿದ್ದು, ಮುಂದಿನ ಸಂಧ್ಯಾಕಾಲದಲ್ಲಿ ಹಲವಾರು ತೊಂದರೆಗಳನ್ನು ಪಡುವಂತಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಕೆಗಾಗಿ ಶ್ರಮಿಸುವೇ. ಮುಂಬರುವ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ತಮ್ಮ ಸಮಸ್ಯೆಯ ಕುರಿತು ಚರ್ಚಿಸಿ ಸೂಕ್ತ ಪರಿಹಾರವನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೇ ಎಂದರು.
ಗುರುಪಾದ ಮಹಾಸ್ವಾಮಿ ಸಾನಿಧ್ಯ ವಹಿಸಿದ್ದರು. ರೂಪಾ ಅಂಗಡಿ, ಮಂಜುಳಾ ಹುಲ್ಲಣ್ಣವರ, ಪಡಿಯಪ್ಪ ಪೂಜಾರ, ಇಂದೀರಾ ತೇಲಿ, ಮಿಥುನ್‌ ಪಾಟೀಲ, ಶಿವಪ್ಪ ಕರಿಲಿಂಗಣ್ಣವರ, ವಿದ್ಯಾ ಬಡಿಗೇರ, ವ್ಹಿ.ಆರ್‌.ಗುಡಿಸಾಗರ, ನಂಜುಡಯ್ಯ, ವಾಯ್‌.ಡಿ.ಗಾಣಿಗೇರ, ದಶರಥ ಗಾಣಿಗೇರ ಸೇರಿದಂತೆ ಅನೇಕರು ಇದ್ದರು. ಅಭಿಷೇಕ ಇನಾಂದಾರ ನಿರೂಪಿಸಿ, ವಂದಿಸಿದರು.

ರಾಜ್ಯದ ಸರ್ಕಾರಿ ನೌಕರರಿಗೆ ಯಾವದೇ ಭದ್ರತೆ ಇಲ್ಲದ ರೀತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಮಾಣ ಮಾಡಿವೆ. ಸೇವೆಯಿಂದ ನಿವೃತ್ತಿಯ ನಂತರ ಕುಟುಂಬದ ನಿರ್ವಹಣೆಯು ನೂತನ ಜಾರಿಗೆಯಾಗಿರುವ ಪಿಂಚಣಿ ವ್ಯವಸ್ಥೆಯಿಂದ ಅಭದ್ರವಾಗಿದೆ. ಅದನ್ನು ಕೂಡಲೇ ನಿಲ್ಲಿಸಬೇಕು. ಹಿಂದೆ ಇರುವ ವ್ಯವಸ್ಥೆಯನ್ನೆ ಜಾರಿಗೊಳಿಸಬೇಕು ಎಂದರು.
-ನಾಗನಗೌಡ.ಎಂ.ಎ 

loading...