ನೂತನ ಬಸ್‌ ತಂಗುದಾಣ ಉದ್ಘಾಟನೆ

0
25
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ದಾಂಡೇಲಿಯ ರೋಟರಿ ಕ್ಲಬ್‌ ವತಿಯಿಂದ ಸಂಡೇ ಮಾರುಕಟ್ಟೆಯ ಬಳಿ ನಿರ್ಮಾಣಗೊಂಡ ನೂತನ ಬಸ್‌ ತಂಗುದಾಣವನ್ನು ಸಚಿವ ಆರ್‌. ವಿ. ದೇಶಪಾಂಡೆ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದೇಶಪಾಂಡೆಯವರು ನಗರದ ಸೌಂದರ್ಯ ವರ್ಧನೆಗೆ ನೂತನ ತಂತ್ರಜ್ಞಾನ ಅಳವಡಿತ ಬಸ್‌ ನಿಲ್ದಾಣಗಳು ಶೋಭೆ ತರಲಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬಿನ ಅಧ್ಯಕ್ಷ ರವಿ ನಾಯ್ಕ, ಇನ್ನಿರವಿಲ್‌ ಕ್ಲಬ್‌ ಅಧ್ಯಕ್ಷ ರಾಜೇಶ್ವರಿ ನಾಯಕ, ಸುನಿತಾ ಮೆಹರವಾಡೆ, ನೀಲಾಂಬಿಕಾ ಕನಿಮೆಹಳ್ಳಿ, ರೋಟರಿ ಸದಸ್ಯರಾದ ರಾಜೇಶ ತಿವಾರಿ, ಎಚ್‌.ವಾಯ್‌. ಮೆಹರವಾಡೆ, ಎಸ್‌.ಪ್ರಕಾಶ ಶೆಟ್ಟಿ, ಉಮೇಶ.ಜಿ.ಇ, ಎಸ್‌.ಬಿ.ಬಿರದಾರ, ಬಸ್‌ ತಂಗುದಾಣದ ದಾನಿಗಳಾದ ರೊ. ರಾಜೇಶ ವೆರ್ಣೇಕರ್‌, ಅಶುತೋಷರಾಯ್‌, ಗಣೇಶ ಕಾಮತ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಯ್ಯದ್‌ ತಂಗಳ, ನಗರಸಭೆಯ ಅಧ್ಯಕ್ಷ ಎನ್‌.ಜಿ.ಸಾಳುಂಕೆ, ಉಪಾಧ್ಯಕ್ಷ ಮಹಮ್ಮದ್‌ ಫನಿಬಂದ್‌, ನಗರಸಭಾ ಸದಸ್ಯರು, ಕಾಗದ ಕಾರ್ಖಾನೆಯ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಕೆ.ಜಿ ಗಿರಿರಾಜ, ರೋಟರಿಯ ಇತರ ಸದಸ್ಯರು ಉಪಸ್ಥಿತರಿದ್ದರು.

loading...