ನೌಕರರ ಕನಿಷ್ಠ ಭದ್ರತೆ ಒದಗಿಸುವಲ್ಲಿ ವಿಫಲ: ಶಾಸಕ ಮಾಮನಿ

0
12
loading...

ಕನ್ನಡಮ್ಮ ಸುದ್ದಿ-ಸವದತ್ತಿ: ಹೊಸ ಮತ್ತು ಹಳೆಯ ಪಿಂಚಣಿ ಎಂದು ಹೋರಾಟ ಮಾಡುವದಕ್ಕಿಂತ ಮೊದಲು ಸರಕಾರಿ ಮೇಲಾಧಿಕಾರಿಗಳೇ ಎಲ್ಲವನ್ನೂ ಪರಿಗಣಿಸಿ ಆಲೋಚನೆ ನಡೆಸಿದ್ದರೆ ಈ ಎನ್‌ಪಿಎಸ್‌ ಹೋರಾಟ ಬಹುಶ: ನಡೆಯುತ್ತಿರಲಿಲ್ಲವೆಂದು ಶಾಸಕ ಆನಂದ ಮಾಮನಿ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಸಹಕಾರದೊಂದಿಗೆ ತಾಲೂಕಿನ ಸರಕಾರಿ ಎನ್‌ಪಿಎಸ್‌ ನೌಕರರ ಸಮಾವೇಶ ಮತ್ತು ವಿಚಾರ ಸಂಕೀರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಪಿಂಚಣಿ ಯೋಜನೆ ಸರಕಾರಿ ನೌಕರರ ಸಂಧ್ಯಾಕಾಲ ಬದುಕಿಗೆ ಕನಿಷ್ಠ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂಬ ಶೀರ್ಷಿಕೆಯಡಿ ವಿಚಾರ ಸಂಕಿರಣ ನಡೆಯುತ್ತಿದೆ. ಸಾಕಷ್ಟು ಬಾರಿ ಸಮಾಲೋಚಿಸಿ ಅಧಿಕಾರಿಗಳೇ ಬರೆದಿದ್ದನ್ನು ಅದೂ ಸಹಿತ ನಿಮ್ಮ ವಿಶ್ವಾಸದ ಮೇರೆಗೆ ಮಾಡಿರುವಂತದ್ದು, ರಾಜ್ಯವಿರಲಿ ಕೇಂದ್ರವಿರಲಿ ನೀವು ನೀಡಿದ ಯೋಜನೆಗಳ ಕಡತಗಳನ್ನೇ ಸರಕಾರ ವಿಚಾರಿಸುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಸಿದ್ದಾಂತಗಳ ಮೇಲೆ ಆಡಳಿತ ನಡೆಸುತ್ತವೆ. ವಿಆರ್‌ಎಸ್‌ ಸೇರಿದಂತೆ ಅನೇಕ ಯೋಜನೆಗಳನ್ನು ನೀಡುವಲ್ಲಿ ಅದರ ಸಾಧಕ ಬಾಧಕಗಳನ್ನು ಮೇಲಾಧಿಕಾರಿಗಳು ವಿಚಾರಿಸಬೇಕಿತ್ತು. ಇವುಗಳನ್ನೆಲ್ಲ ಆಯ್‌ಎಎಸ್‌ ಮತ್ತು ಆಯ್‌ಪಿಎಸ್‌ಗಳಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳೇ ಮೊದಲೇ ಚರ್ಚಿಸಿ ಸರಕಾದ ಮುಂದೆ ಇಡಬೇಕಿತ್ತು. ಸಧ್ಯಕ್ಕೆ 15 ತಾರತಮ್ಯಗಳ ಎನ್‌ಪಿಎಸ್‌ ಹಾಗೂ ಓಪಿಎಸ್‌ ಎಂದು ವ್ಯತ್ಯಾಸ ಹೋರಾಟ ನಡೆಸಿದ್ದೀರಿ. ಗ್ರಾಮ ಪಂಚಾಯತಿಯಿಂದ ಪಾರ್ಲಿಮೆಂಟವರೆಗೂ ಅನೇಕ ವಿಷಯಗಳ ಚರ್ಚೆ ನಡೆಯುತ್ತವೆ. ಅವುಗಳಲ್ಲಿ ಇದೂ ಒಂದಾಗಬೇಕಿತ್ತು ಎಂದರು.
ಎಪಿಎಮ್‌ಸಿಯಿಂದ ಮಾಮನಿ ಕಲ್ಯಾಣ ಮಂಟಪದವರೆಗೆ ಬೃಹತ್‌ ಜಾಗÀೃತ ಬೈಕ್‌ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ತಾಲೂಕಾ ಎನ್‌.ಪಿ.ಎಸ್‌. ನೌಕರರ ಸಂಘಟನೆ ಅಧ್ಯಕ್ಷ ಎಮ್‌.ಬಿ. ಮುದ್ದನಗೌಡ್ರ, ಎಸ್‌.ಆರ್‌. ಅವರಾದಿ, ವಾಯ್‌.ಎಮ್‌. ಯಾಕೊಳ್ಳಿ, ಬಸವರಾಜ ಗುರಿಕಾರ ಜಗದೀಶಗೌಡÀ ಪಾಟೀಲ, ಜಯಕುಮಾರ ರಾ. ಹೆಬಳಿ. ರಮೇಶ ಸಂಗಾ, ತಾಲೂಕ ಪಂಚಾಯತ, ಅಧ್ಯಕ್ಷ ವಿನಯಕುಮಾರ ದೇಸಾಯಿ, ಶಿವಾನಂದ ಗು. ಪಟ್ಟಣಶೆಟ್ಟಿ. ಪ್ರಭು ಬ. ಪ್ರಭುನವರ, ಎಸ್‌.ಎಲ್‌. ಭಜಂತ್ರಿ. ಸೇರಿದಂತೆ ಅನೇಕ ಗಣ್ಯರು ಇದ್ದರು.

loading...