ನ್ಯಾ. ಸದಾಶಿವ ವರದಿ ವಿರೋಧಿಸಿ ನಾಳೆ ಪ್ರತಿಭಟನೆ

0
27
loading...

ಗದಗ: ನ್ಯಾ.ಸದಾಶಿವ ಆಯೋಗದ ವರದಿಯನ್ನು ತಿರಸ್ಕಾರ ಮಾಡಲು 99 ದಲಿತ ಸಮುದಾಯದಿಂದ ಜ. 29 ರಂದು ಗದಗ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಿದ್ದಾರೆ.
ಶನಿವಾರ ನಗರದಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಘಟಕ ಗದಗ ಜಿಲ್ಲಾ ಘಟಕದ ರವಿಕಾಂತ ಚವ್ಹಾಣ ಹಾಗೂ ಪರಶುರಾಮ ಕಟ್ಟಿಮನಿ ಅವರು ಅವೈಜ್ಞಾನಿಕ, ಅಸಂವಿಧಾನಿಕ, ರಾಜಕೀಯ ಪ್ರೇರಿತ, ಅಸಂಬದ್ಧ, ವರದಿಯನ್ನು ತಿರಸ್ಕರಿಸಲು ಗದಗ ಜಿಲ್ಲಾ 99 ದಲಿತ ಸಮುದಾಯದವರಿಂದ ಈ ಬೃಹತ್‌ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ ಎಂದರು.
ಜ. 29 ಸೋಮವಾರ ಮುಂಜಾನೆ 11 ಗಂಟೆಗೆ ನಗರದ ಮುನ್ಸಿಪಲ್‌ ಕಾಲೇಜ ಆವರಣದಿಂದ ಪ್ರತಿಭಟನಾ ಮೆರವಣಿಗೆಯು ಆರಂಭಗೊಂಡು ಗಾಂಧಿ ಸರ್ಕಲ್‌, ಟಾಂಗಾಕೂಟ, ಹತ್ತಿಕಾಳ ಕೂಟ, ಭೂಮರಡ್ಡಿ ಸರ್ಕಲ್‌, ಹಳೆ ಡಿ.ಸಿ. ಆಫೀಸ್‌, ಕಾಟನ್‌ ಸೇಲ್‌ ಸೂಸೈಟಿವರೆಗೆ ನಡೆಯುವದು ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನಸೇರುವರು ಎಂದರು.
ನ್ಯಾ. ಸದಾಶಿವ ಆಯೋಗದ ವರದಿಯು ತನ್ನ ವ್ಯಾಪ್ತಿ ಮೀರಿ ಒಳಮೀಸಲಾತಿ ಕಲ್ಪಿಸಿ ವರದಿಯಲ್ಲಿ ಶಿಪಾರಸ್ಸು ಮಾಡಿದ್ದು, ಇದರಿಂದ ದಲಿತರಲ್ಲಿ ವಿಷ ಬೀಜ ಬಿತ್ತುವ ಹುನ್ನಾರವಿದ್ದು ಡಾ.ಬಾಬಾಸಾಹೇಬ ಅಂಬೇಡ್ಕರವರ ಆಶಯ ನಿರಾಶೆ ಆಗುತ್ತದೆ. ದಲಿತರು ಒಗ್ಗೂಡುವ ಬದಲಾಗಿ ತಮ್ಮ ತಮ್ಮಲ್ಲೇ ದ್ವೇಷಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ವರದಿ ಶಿಪಾರಸ್ಸು ಆಗುವದರಿಂದ ಸುಡುಗಾಡು ಸಿದ್ಧರ, ಚನ್ನದಾಸರ, ಹೇಳವರು, ಗಂಡೆ ಚೋರರು, ಮೇಲು ಶಿಕಾರಿಗಳು, ಕುಂಚಿಕೊರವರು, ಬಂಜಾರ-ಲಂಬಾಣಿಗÀರು, ಭೋವಿ, ವಡ್ಡರ, ಕೊರಚ, ಕೊರಮರು, ಭಜಂತ್ರಿ, ಡೊಂಬರು, ಕಿಳ್ಳಿಕ್ಯಾತರು, ಗೊಂದಲಿಗರು, ಬುಡಬುಡಕಿಯರು, ದುರ್ಗಾಮುರುಗ್ಯಾ, ಮೊಗೇರ, ಗೊಂಡ, ಹಕ್ಕಿ-ಪಕ್ಕಿ, ಜೇನು ಕುರುಬ, ಕಾಡುಕುರುಬ, ಎತ್ತಿನಕೊರವ, ಜೋಗೇರ, ಯ್ಯಾಸಗಾರ, ಮಣ್ಣು ಒಡ್ಡರು, ಕಲ್ಲು ಒಡ್ಡರು, ಊರ ಒಡ್ಡರು ಇನ್ನೂ ಇತರೇ ಜನಾಂಗ. ಒಟ್ಟಾರೆ 99 ಜಾತಿಗಳಿಗೆ ಅನ್ಯಾಯವಾಗುವ ವರದಿಯಾಗಿದೆ. ರಾಜ್ಯ ಸಮಿತಿಯ ಕರೆಯ ಮೇರೆಗೆ ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಮನೆ/ ಕಛೇರಿ ಎದುರಿಗೆ ಪ್ರತಿಭಟನೆ ಮಾಡಿ ಮನವಿ ಅರ್ಪಿಸಲು ತಿರ್ಮಾನಿಸಿದೆ. ಅದರಂತೆಯೇ ಪ್ರತಿಭಟನಾ ಮೆರವಣಿಗೆ ನಂತರ ಗದಗ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯಾದ ಕಾಟನ್‌ ಸೇಲ್‌ ಸೊಸೈಟಿಯ ಮುಂದೆ ಪ್ರತಿಭಟನೆಯನ್ನು ಮಾಡಲಾಗುವದು ಎಂದು ವಿವರಣೆ ನೀಡಿದರು.
ಐ.ಎಸ್‌.ಬಡಿಗೇರ, ಚಂದ್ರಕಾಂತ ಚವ್ಹಾಣ, ಮೋಹನ ಭಜಂತ್ರಿ, ವಿ.ಜಿ.ಗಡಾದ, ಸುರೇಶ ಕಟ್ಟಿಮನಿ, ಐ.ಎಸ್‌.ಪೂಜಾರ, ಹುಚ್ಚಪ್ಪ ಸಂದಕದ ಕೆ.ಡಿ.ಲಮಾಣಿ, ಗಣೇಶ ಲಮಾಣಿ, ಚಿನ್ನಪ್ಪ ವಡ್ಡಟ್ಟಿ, ಬಸವರಾಜ ವಡ್ಡರ, ಜಯಕ್ಕ ಕಳ್ಳಿ, ಮರಿಯಪ್ಪ ವಿಭೋತಿ, ಸುರೇಶ ಚವ್ಹಾಣ, ಪರಮೇಶ ಲಮಾಣಿ, ರಾಘವೇಂದ್ರ ಧಾರವಾಡ, ಮೋಹನ ಕಟ್ಟಿಮನಿ, ಚನ್ನಪ್ಪ ಲಮಾಣಿ, ಪಾಂಡು ಚವ್ಹಾಣ, ಗಿರೀಶ ಕಾರಬಾರಿ, ಅನಿಲ ಕಾರಬಾರಿ, ಕೃಷ್ಣಾ ಲಮಾಣಿ, ಬಸವರಾಜ ಭಜಂತ್ರಿ, ಹುಚ್ಚಪ್ಪ ಭಜಂತ್ರಿ, ಶೇಖು ಗಡಾದ, ಧರ್ಮಸಿಂಗ್‌, ಜಿ.ಪಿ. ಲಮಾಣಿ, ಡಿ.ಡಿ ಸಂಕನಕಲ್ಲ, ಸಹದೇವ ಕೋರಿ, ಬಾಲಾಜಿ ಪೂಜಾರ, ಪರಶುರಾಮ ಕರಡಿಕೊಳ್ಳ, ನಾಗರಾಜ ಕಟ್ಟಿಮನಿ, ವಿನೋದ ಮುರಡಿ, ದುರಗಪ್ಪ ಸಂಕನಕಲ್ಲ, ಬಸವರಾಜ ಗದಗಿನ, ದುರಗಪ್ಪ ಬಂಡಿವಡ್ಡರ, ಯಲ್ಲಪ್ಪ ಗಡಾದ ಮುಂತಾದವರು ಈ ಸಂದರ್ಭದಲ್ಲಿದ್ದರು.

loading...