ಪಂಚಾಯತ ನೌಕರರ ಧರಣಿ

0
31
loading...

ರಾಮದುರ್ಗ: ಪಂಚಾಯತ ನೌಕರರ ಬೇಡಿಕೆಗಳು ಈಡೇರದ ಹಿನ್ನಲೇಯಲ್ಲಿ ಪಂಚಾಯತ ನೌಕರರು ಸೋಮವಾರ ತಾ.ಪಂ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ (ಸಿಐಟಿಯುಗೆ ಸಂಯೋಜಿತ) ರಾಮದುರ್ಗ ತಾಲೂಕ ಸಮಿತಿ ನೇತೃತ್ವದಲ್ಲಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.
ರಾಜ್ಯ ಸರಕಾರದಿಂದ ಹಾಗೂ ಜಿ.ಪಂ ಯಿಂದದ ಬಂದಿರುವ ಆದೇಶಗಳನ್ನು ಪಂಚಾಯತ ಮಟ್ಟದ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂದು ಕಳೇದ ಡಿ. 13 ರಂದು ತಾಲೂಕಾ ಪಂಚಾಯತ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗಿತ್ತು. ಆ ಸಮಯದಲ್ಲಿ ತಾಲೂಕಾ ಅಧಿಕಾರಿಗಳು ನಮ್ಮ ಬೇಡಿಕೆ ಇತ್ಯರ್ಥಪಡಿಸಲು ಡಿ. 18 ರ ವರೆಗೆ ಸಮಯಾವಕಾಶ ಕೇಳಿ ಪತ್ರ ನೀಡಿದ್ದರು.
ಡಿ. 18 ಕಳೆದರೂ ಪಂಚಾಯತ ನೌಕರರ ಸಮಸ್ಯೆಗಳು ಬಗೆ ಹರಿಯದೇ ಹಾಗೂ ತಾಲೂಕಾ ಪಂಚಾಯತ ಅಧಿಕಾರಿಗಳಿಂದ ಯಾವುದೇ ಉತ್ತರ ಬರದೇ ಇರುವುದರಿಂದ ಪಂಚಾಯತ ನೌಕರರು ತಾ.ಪಂ ಕಛೇರಿ ಆವರಣದಲ್ಲಿ ಅನಿರ್ಧಿಷ್ಠ ಧರಣಿ ಸತ್ಯಾಗ್ರಹ ಪ್ರಾರಂಭವಾಗಿದ್ದು, ತಮ್ಮ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವವರೆಗೆ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಪಟ್ಟು ಹಿಡಿದರು.
ಅನಿರ್ಧಿಷ್ಠ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಪಂಚಾಯತ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನೆಖಾನ ಹಾಗೂ ಜಿಲ್ಲಾ ಗೌರವಾಧ್ಯಕ್ಷ ವಿ.ಪಿ. ಕುಲಕರ್ಣಿ ಮಾತನಾಡಿ, ಸರಕಾರದ ಹಾಗೂ ಜಿ.ಪಂ ಆದೇಶಗಳನ್ನು ಕಣ್ತೆರೆದು ನೋಡದೇ ಸ್ಥಳೀಯ ಮಟ್ಟದ ಅಧಿಕಾರಿಗಳು ಪಂಚಾಯತ ನೌಕರರ ಮೇಲೆ ಶೋಷಣೆ ಮಾಡುತ್ತಿದ್ದಾರೆ. ಈ ನೀತಿಯ ವಿರುದ್ಧ ಹೋರಾಟವೇ ನಮಗೆ ದಾರಿ. ಪಂಚಾಯತ ಮಟ್ಟದ ಅಧಿಕಾರಿಗಳು ತಾಲೂಕಾ ಪಂಚಾಯತ ಅಧಿಕಾರಿಗಳು ಕೂಡಲೇ ಸೇರಿ ಪಂಚಾಯತ ನೌಕರರ ಸಮಸ್ಯೆಗಳು ಬಗೆಹರಿಸದಿದ್ದರೆ ತಾಲೂಕಾ ಪಂಚಾಯತ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ತಾಲೂಕಾಧ್ಯಕ್ಷ ದುಂಡಯ್ಯ ದಳವಾಯಿ, ಕಾರ್ಯದರ್ಶಿ ವೀರಭದ್ರ ಕಂಪ್ಲಿ, ಮಲ್ಲಣ್ಣ ಆಲೂರ, ತಿಪ್ಪಣ್ಣ ಪೈಲಿ, ಸಾಧಿಕ ಹುದ್ದಾರ, ನಿಂಗಮ್ಮ ಕುಳ್ಳೂರ ಸೇರಿದಂತೆ ಮುಂತಾದವರು ಧರಣಿಯ ನೇತೃತ್ವ ವಹಿಸಿದ್ದರು.

loading...