ಪತಂಜಲಿ ಸಂಸ್ಥೆಯಲ್ಲಿ ಫ್ರಾನ್ಸ್ ಸಂಸ್ಥೆಯಿಂದ 3 ಸಾವಿರ ಕೋಟಿ ಬಂಡವಾಳ ಹೂಡಿಕೆ!

0
12
ನವದೆಹಲಿ: ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಭಾವಿ ಸಂಸ್ಥೆಯಾಗಿ ಬೆಳೆಯುತ್ತಿರುವ ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಲು ಫ್ರಾನ್ಸ್ ಮೂಲದ ಸಂಸ್ಥೆಯೊಂದು ಮುಂದೆ  ಬಂದಿದೆ.
ಮೂಲಗಳ ಪ್ರಕಾರ ಫ್ರಾನ್ಸ್ ನ ಚಿಲ್ಲರೆ ಮಾರುಕಟ್ಟೆ ದೈತ್ಯ ಸಂಸ್ಥೆ ಮೊಯೆಟ್ ಹೆನ್ನೆಸ್ಸಿ-ಲೂಯಿ ವಿಟ್ಟೊನ್ ಗ್ರೂಪ್ ಪತಂಜಲಿ ಸಂಸ್ಥೆಯಲ್ಲಿ ಸುಮಾರು 500 ಮಿಲಿಯನ್ ಅಮೆರಿಕನ್ ಡಾಲರ್ (ರೂ. 3250 ಕೋಟಿ) ಹೂಡಿಕೆ ಮಾಡಲು  ಮುಂದಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ಪತಂಜಲಿ ಸಂಸ್ಥೆಯ ವಕ್ತಾರ ಎಸ್.ಕೆ ಗುಪ್ತಾ ತಿಜರ್ವಾಲಾ ಅವರು ಹಂಚಿಕೊಂಡಿದ್ದು, ‘ನಮ್ಮ ಅಭಿವೃದ್ಧಿಗಾಗಿ ವಿದೇಶಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತೇವೆ. ಅದೇ ರೀತಿ ದೇಶದ ಒಳಿತಿಗಾಗಿ ನಾವು ವಿದೇಶಿ  ಹೂಡಿಕೆ ಪಡೆದುಕೊಳ್ಳಲು ಹಿಂಜರಿಯುವುದಿಲ್ಲ. ನಾವು ಇದನ್ನು ನಮ್ಮ ಸ್ವಂತಕ್ಕೆ ಪಡೆದುಕೊಳ್ಳುತ್ತೇವೆ. ಷೇರು ನೀಡುವುದಿಲ್ಲ ಎಂದು ಪತಂಜಲಿ ಸಂಸ್ಥೆಯ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಹೇಳಿದ್ದಾರೆ ಎಂದು ಮಾಹಿತಿ  ನೀಡಿದ್ದಾರೆ.
ಪತಂಜಲಿ ಸಂಸ್ಥೆಯೊಂದಿಗೆ ಸೇರಿ ನಾಗಪುರ, ಗ್ರೇಟರ್ ನೋಯ್ಡಾ, ಅಸ್ಸಾಂ, ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಕಂಪೆನಿಯು ಘಟಕಗಳನ್ನು ಆರಂಭಿಸಲು ಮೊಯೆಟ್ ಹೆನ್ನೆಸ್ಸಿ-ಲೂಯಿ  ವಿಟ್ಟೊನ್ ಗ್ರೂಪ್  ಚಿಂತನೆ ನಡೆಸಿದೆ. ಒಟ್ಟು 10,100 ಎಕರೆಯಲ್ಲಿ ಔಷಧೀಯ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಸುಮಾರು 5,000 ಕೋಟಿ ಹಣ ಬೇಕು ಎಂದು ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.
loading...