ಪ್ರಧಾನಿ ಮನ್‌ ಕಿ ಬಾತ್‌ಗೆ ಮಾತ್ರ ಸಿಮೀತ

0
16
loading...

ವಿಜಯಪುರ:- ದೇಶದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತೇವೆ, ಪೆಟ್ರೋಲ್‌ ಬೆಲೆ ಇಳಿಸುತ್ತೇವೆ, ಅಭಿವೃದ್ಧಿ ಸೂಚ್ಯಾಂಕ ಏರಿಸುತ್ತೇವೆ ಎಂಬ ನೂರಾರು ಕನಸುಗಳನ್ನು ಯುವಕರಿಗೆ ಬಿತ್ತಿ,ಅಧಿಕಾರ ಸೂತ್ರ ಹಿಡಿದ ಪ್ರಧಾನಿ ಮೋದಿಯವರ ಸಾಧನೆ ಮನ್‌ ಕಿ ಬಾತ್‌ಗೆ ಸಿಮೀತವಾಗಿದೆ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಹೇಳಿದರು.
ವಿಜಯಪುರದಲ್ಲಿ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಬೂತ್‌ ಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, À ಪ್ರಧಾನಿ ಮೋದಿಯವರು ದೇಶದ ಕೋಟ್ಯಾಂತರ ಯುವಕರ ಆಶಯಗಳನ್ನು ಒಡೆದು ಹಾಕಿದ್ದಾರೆ ಇದು ಕಾರ್ಯ ರೂಪಕ್ಕೆ ಬರದೆ ಯುವಕರು ಮೋದಿ ಆಡಳಿತದಿಂದ ಬೇಸತ್ತಿದ್ದಾರೆ ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ಯ ಪ್ರತಿ ಬೂತ್‌ ಮಟ್ಟದ ಕಾರ್ಯಕರ್ತರಿಗೆ ತರಬೇತಿ ನೀಡುವ ಶಿಬಿರಗಳು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯ ಕಳೆದ ಬಾರಿ 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳನ್ನು ಕಾಂಗ್ರೆಸ್‌ ಜಯ ಸಾಧಿಸಿತ್ತು. ಈ ಬಾರಿ 8 ಕ್ಷೇತ್ರಗಳಲ್ಲಿ ನಾವು ಗೆಲವು ಸಾಧಿಸುತ್ತೇವೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ನಮ್ಮ ಸಾಧನೆ ಮತ್ತು ವಿಶೇಷವಾಗಿ ನೀರಾವರಿ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ನಮಗೆ ಎಲ್ಲೆಡೆ ಜಯತಂದು ಕೊಡಲಿದೆ ಎಂದರು.
ಬೂತ್‌ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಇಲ್ಲದಿರುವುದೇ ಇದಕ್ಕೆ ಕಾರಣ. ಅಲ್ಲಿ ಅನೇಕ ವಿಧಾನಸಭಾ ಕ್ಷೇತ್ರಗಲ್ಲಿ ಬೂತ್‌ ಸಮಿತಿಗಳು ಇರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಪಕ್ಷದ ಏಜೆಂಟರು ಇರಲಿಲ್ಲ. ಇದು ಪಕ್ಷ ಅಧಿಕಾರದಿಂದ ದೂರ ಉಳಿಯಲು ಕಾರಣವಾಯಿತು. ಆದರೆ ಕರ್ನಾಟಕದಲ್ಲಿ ಕಳೆದ ಒಂದುವರೆ ವರ್ಷದಿಂದ ತಳಮಟ್ಟದಿಂದ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದು, ಇನ್ನು ಹೆಚ್ಚು ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಬೇಕಿದೆ ಎಂದರು.
ಯುಪಿಎ ಆಡಳಿತಾವಧಿಯಲ್ಲಿ ಸುಶೀಲಕುಮಾರ ಸಿಂಧೆಯವರು ಕೇಂದ್ರ ಇಂಧನ ಮಂತ್ರಿಗಳಾಗಿ ಅವರಿಗೆ ಸಹಾಯಕ ಸಚಿವರಾಗಿ ವೇಣುಗೋಪಾಲರವರು ಎನ್‌.ಟಿ.ಪಿ.ಸಿ ಸೂಪರ್‌ ಥರ್ಮಲ್‌ ಘಟಕ ನೀಡಿದ್ದು, ಕೈಗಾರಿಕಾ ನಕ್ಷೆಯಲ್ಲಿ ಶೂನ್ಯವಾಗಿದ್ದ ವಿಜಯಪುರ ಜಿಲ್ಲೆಗೆ ಸ್ಥಾನ ಕಲ್ಪಿಸಿದ್ದಾರೆ ಎಂದರು.
ಎ.ಐ.ಸಿ.ಸಿ. ಕಾರ್ಯದರ್ಶಿ ಮಾಣಿಕಂ ಟ್ಯಾಗೋರ್‌, ಡಿ.ಸಿ.ಸಿ. ಅಧ್ಯಕ್ಷ ರವಿಗೌಡ ಪಾಟೀಲ, ನಗರ ಶಾಸಕ ಡಾ.ಮಕ್ಬೂಲ ಬಾಗವಾನ, ರಾಜು ಆಲಗೂರ, ಕೆ.ಪಿ.ಸಿ.ಸಿ ವೀಕ್ಷಕರಾದ ಡಿ.ಆರ್‌.ಪಾಟೀಲ, ಜಲಜಾ ನಾಯಕ, ಡಿ.ಸಿ.ಚಂದ್ರಶೇಖರ, ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ರಾಜಶೇಖರ ಮೆನಸಿನಕಾಯಿ, ದಯಾನಂದ ಪಾಟೀಲ, ಕಾಂತಾ ನಾಯಕ, ರಾಮಲಿಂಗಯ್ಯ, ಬಿ.ಆರ್‌.ನಾಯ್ಡು, ಬಸವಪ್ರಭು ಸರನಾಡಗೌಡ, ಸಂಗಮೇಶ ಬಬಲೇಶ್ವರ, ಬ್ಲಾಕ್‌ ಅಧ್ಯಕ್ಷ ಜಾವೀದ ಬಾಗವಾನ, ಮಂಜುಳಾ ಗಾಯಕವಾಡ, ಅಫ್ತಾಬ ಖಾದ್ರಿ, ಮಹಾದೇವಿ ಗೋಕಾಕ, ಅಜಯ ಪಾಟೀಲ ಇದ್ದರು.

loading...