ಫೆಬ್ರುವರಿ ಕೊನೆ ವಾರ ತಾಲೂಕು ಸಾಹಿತ್ಯ ಸಮ್ಮೇಳನ

0
20
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಫೆಬ್ರುವರಿ ಕೊನೆಯ ವಾರದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಕನ್ನಡ ಸಾಹಿತ್ಯ ಭವನದಲ್ಲಿ ಸೇರಿದ್ದ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯಲ್ಲಿ ಮಾತನಾಡಿ ಅಂಗಡಿಯವರು ಕಳೆದ ವರ್ಷ ತಾಲೂಕಿನ ಇತಿಹಾಸ ಪ್ರಸಿದ್ದಿ ಹೊಂದಿರುವ ನವಲಿ ಗ್ರಾಮದಲ್ಲಿ 5ನೇ ತಾಲೂಕು ಸಮ್ಮೇಳ ಅದ್ದೂರಿಯಾಗಿ ಆಚರಿಸಲಾಯಿತು. ಅದರಂತೆ ಫೆಬ್ರುವರಿ ಕೊನೆಯ ವಾರದಲ್ಲಿ 6ನೇ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲು ತಾಲೂಕು ಘಟಕಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು. ಏಪ್ರಿಲ್‌ ಕೊನೆಯಲ್ಲಿ ಅಥವಾ ಮೇ ಮೊದಲನೆ ವಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಲಕ್ಷಣಗಳಿವೆ ಈ ಕಾರಣಕ್ಕೆ ಫೆಬ್ರುವರಿಯಲ್ಲಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಸಮ್ಮೇಳನ ಕುರಿತಂತೆ ಕೊಪ್ಪಳದಲ್ಲಿ ನಡೆಯುವ ಜಿಲ್ಲಾ ಕಸಾಪ ಕಾರ್ಯಕಾರಿ ಮಂಡಳಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವದು ಎಂದು ತಿಳಿಸಿದರು.

ಸಮ್ಮೇಳನ ಸಂಚಿಕೆ: ಜಿಲ್ಲಾ ಕಸಾಪ ಮಾಧ್ಯಮ ಪ್ರತಿನಿಧಿ, ಹಿರಿಯ ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ ಸಮ್ಮೇಳನದ ಸಂದರ್ಭದಲ್ಲಿ ವಿಶೇಷ ಸಂಚಿಕೆಯನ್ನು ಹೊರತರಬೇಕು ಎಂದು ತಿಳಿಸಿದರು.
ಇದಕ್ಕಾಗಿ ಇಂದಿನಿಂದ ಸಿದ್ದತೆ ನಡೆಸಬೇಕು ಕಾಟಾಚಾರಕ್ಕೆ ಸಂಚಿಕೆ ಹೊರತರಬಾರದು ಇದನ್ನು ಪ್ರಕಟಿಸಲು ಸಂಪಾದಕ ಮಂಡಳಿಯನ್ನು ರಚಿಸಬೇಕು ಎಂದು ಸಲಹೆ ಮಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್‌.ಬಿ.ಗೊಂಡಬಾಳ ಮಾತನಾಡಿ ಸಮ್ಮೇಳನ ಯಶಸ್ವಿಯಾಗಲು ಸರ್ವ ಸದಸ್ಯರು ಸಹಕರಿಸಬೇಕು ಎಂದು ತಿಳಿಸಿದರು. ಪರಿಷತ್‌ ಸಹ ಕಾರ್ಯದರ್ಶಿ ಸಿ.ಮಹಾಲಕ್ಷ್ಮಿ, ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪತ್ರಕರ್ತ ಮಹಬೂಬ ಹುಸೇನ, ಶ್ರೀನಿವಾಸ ಅಂಗಡಿ, ರುದ್ರೇಶ ಆರಾಳ, ಬಸವರಾಜ ಹೇರೂರು, ಭೀಮಣ್ಣ ಕರಡಿ, ಮಾರೇಶ ವಿಭೂತಿ, ಲಕ್ಷ್ಮಿಕಾಂತ ಹೇರೂರು, ರಮೇಶ ಕುಲಕರ್ಣಿ ಮಾತನಾಡಿದರು.

loading...