ಫೆ. ಮೊದಲವಾರದಲ್ಲಿ ಸಿರ್ಬಡ್‌ ನಿರಾಶ್ರಿತರಿಗೆ ಹಣ ಹಂಚಿಕೆ ಮಾಡಲಾಗುವುದು

0
22
loading...

ಕನ್ನಡಮ್ಮ ಸುದ್ದಿ-ಕಾರವಾರ: ಉ.ಕನ್ನಡ ಜಿಲ್ಲೆಯ ಸಿರ್ಬಡ್‌ ನಿರಾಶ್ರಿತರಿಗೆ ನೀಡಬೇಕಾಗಿದ್ದ 600 ಕೋಟಿ ಪರಿಹಾರದ ಹಣವನ್ನು ಫೆಬ್ರುವರಿ ಮೊದಲವಾರದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ ಹೇಳಿದ್ದಾರೆ.
ನಿರಾಶ್ರಿತರಿಗೆ ಪರಿಹಾರ ಹಣ ಹಂಚಿಕೆ ಮಾಡಬೇಕೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ನೇತೃತ್ವದಲ್ಲಿ ಕಾರವಾರ-ಅಂಕೋಲಾ ನೌಕಾನೆಲೆ ನಿರಾಶ್ರಿತರ ಒಕ್ಕೂಟದ ಸದಸ್ಯರೂ ರಾಜ್ಯ ಬಿಜೆಪಿ ಮಹಿಳಾ ಮೊರ್ಚಾ ಸದಸ್ಯೆ ರೂಪಾಲಿ ಎಸ್‌. ನಾಯ್ಕ ಅವರ ಮುಂದಾಳತ್ವದಲ್ಲಿ ನಿರಾಶ್ರಿತರ ಒಕ್ಕೂಟದ ಸಮಿತಿಯ ಕಾರ್ಯದರ್ಶಿ ಸುಭಾಷ ನಾಯ್ಕ, ಸತೀಶ ಪ್ರಭಾಕರ್‌ ತಳೇಕರ್‌, ದಿನೇಶ ಗೌಡ, ರವಿ ನಾಯ್ಕ ಮೊದಲಾದವರು ಬುಧವಾರ ಮಧ್ಯಾಹ್ನ ದೆಹಲಿ ಲೋಕಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮ ಅವರನ್ನು ಭೇಟಿ ಮಾಡಿ 18/ಂ, 28/ಂ ಪ್ರಕರಣಗಳ ಬಗ್ಗೆ ಹಾಗೂ ಬಿಟ್ಟು ಹೋಗಿರುವ ಪ್ರಕರಣಗಳ ಕುರಿತು ಚರ್ಚೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ ಈಗಾಗಲೆ ನಾನು ಕಾರವಾರದಲ್ಲಿರುವ ನೌಕಾ ನೆಲೆ ಗೆ ಭೇಟಿ ನೀಡಿ ಬಂದಿದ್ದೇನೆ. ಉಳಿದ ಪರಿಹಾರ ಹಣ ಏನು ನೀಡಬೇಕಾಗಿದೆ ಅದಕ್ಕೆ ನಾನೆ ಫೆಬ್ರುವರಿ ಮೊದಲ ವಾರದಲ್ಲಿ ಬಂದು ಪರಿಹಾರ ನೀಡಲಾಗುವುದು ಮತ್ತು ಭೂಮಿ ಕಳೆದುಕೊಂಡವರಿಗೆ ಉದ್ಯೋಗ ಸಹ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಈ ಬಗ್ಗೆ ಉತ್ತರ ಕನ್ನಡ ಸಂಸದ ಹಾಗೂ ಇದೀಗ ಕೇಂದ್ರ ಸಚಿವರಾಗಿರುವ ಅನಂತಕುಮಾರ ಹೆಗಡೆ ಈ ಬಗ್ಗೆ ಅನೇಕ ವರ್ಷದಿಂದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈಗ ಎಲ್ಲಾ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ನಿರಾಶ್ರಿತರಾದವರು ಭಯಪಡುವ ಅವಶ್ಯಕತೆ ಇಲ್ಲ ತಿಳಿಸಿದ್ದಾರೆ.

loading...