ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಶಾಸಕ ಮಾಮನಿ

0
25
loading...

ಕನ್ನಡಮ್ಮ ಸುದ್ದಿ-ಶಿರಸಂಗಿ: ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಪಕ್ಷದ ಮುಖಂಡರು ಒಗ್ಗಟ್ಟಿನಿಂದ ಇದ್ದೇವೆ. ಪ್ರತಿಪಕ್ಷದ ಮುಖಂಡ ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ಸಮೀಪದ ಹೂಲಿ ಗ್ರಾಮದಲ್ಲಿ ಶ್ರೀಗುರು ಹೂಲಿ ಅಜ್ಜನವರ 85 ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಗೆಳೆಯರ ಬಳಗದವರಿಂದ ವಿಟಿಎಮ್‌ಕೆ ಪ್ರೌಢ ಶಾಲೆಯ ಆವರು ಇತ್ತೀಚೆಗೆ ಜರುಗಿದ ಸಂಗೀತ ಹಾಗೂ ಹಾಸ್ಯ ರಸದೌತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೂಲಿ ರಾಜಕೀಯ ಗಂಡು ಮೆಟ್ಟಿನ ಗ್ರಾಮವಾಗಿದೆ. ನಾನು ಶಾಸಕನಾದ ಮೇಲೆ ಪೂಜ್ಯರ ಆಶೀರ್ವಾದದಿಂದ ನಿಮ್ಮೆಲ್ಲರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆನೆ. ಪ್ರತಿಪಕ್ಷದವರಿಗೆ ಅಭಿವೃದ್ಧಿ ಎಂದರೇ ಗೊತ್ತಿಲ್ಲ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದರು.
ಹೂಲಿಯಿಂದ ಹರ್ಲಾಪೂರ ರಸ್ತೆ 2.5 ಕೋಟಿ ರೂ ಹಾಗೂ 58 ಲಕ್ಷ ರೂ ವೆಚ್ಚದ ರಸ್ತೆ ಕಾಂಕ್ರೀಟ್‌ ಮತ್ತು ಸುವರ್ಣ ಗ್ರಾಮದಲ್ಲಿ ಅಭಿವೃದ್ಧಿ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೇವಲ 35 ಲಕ್ಷ ರೂ ಸಾಲ ನೀಡುತ್ತಿದ್ದರು ಅದನ್ನಾ 1 ಕೋಟಿ 70 ಲಕ್ಷ ರೂಪಾಯಿವರೆಗೆ ನೀಡುವ ಪ್ರಾಮಾಣಿಕ ಕೆಲಸವನ್ನು ಮಾಡಿದ್ದೆನೆ.
ಟೀಕೆ ಟಿಪ್ಪಣೆ ಮಾಡುವವರಿಗೆ ಜನರೆ ತಕ್ಕ ಉತ್ತರವನ್ನು ಚುನಾವಣೆಯಲ್ಲಿ ನೀಡುತ್ತಾರೆ ಎಂದರು. ಹೂಲಿಯ ಸಂಬಯ್ಯನಮಠದ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜಶೇಖರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣರೆಡ್ಡಿ ಹನಸಿ, ಜಗದೀಶ ಶಿಂತ್ರಿ, ಮೋಹನ ತಿಮ್ಮರಡ್ಡಿ, ಪ್ರಭು ಪ್ರಭುನವರ, ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಮತ್ತಿತರು ಇದ್ದರು.

loading...