ಬಿಜೆಪಿ ಅಧಿಕೃತ ಅಭ್ಯರ್ಥಿ ನಾನೆ: ಮಾರುತಿ ಅಸ್ಟಗಿ

0
31
loading...

ಬಿಜೆಪಿ ಅಧಿಕೃತ ಅಭ್ಯರ್ಥಿ ನಾನೆ: ಮಾರುತಿ ಅಸ್ಟಗಿ
ಕನ್ನಡಮ್ಮ ಸುದ್ದಿ
ಯಮಕನಮರಡಿ 17:ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ನಾನು ಬರುವ ಚುನಾವಣೆಯಲ್ಲಿ ಯಮಕನಮರಡಿ ಮತ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಮುಖಮಡ ಮಾರುತಿ ಅಸ್ಟಗಿ ಹೇಳಿದರು.
ಗ್ರಾಮದಲ್ಲಿ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಪಕ್ಷಕ್ಕೆ ಸಂಬಂದವೆ ಇಲ್ಲದವರು ನಾನೆ ಅಭ್ಯರ್ಥಿ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಆದರೆ ರಾಜ್ಯ ಹಾಗೂ ಜಿಲ್ಲೆಯ ನಾಯಕರು ಯಮಕನಮರಡಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ನನ್ನನೆ ಮುಂದಿನ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.ಆದರೆ ಪಕ್ಷಕ್ಕೆ ದುಡಿಯದೆ ಯಾವುದೆ ಬಿಜೆಪಿ ಸಂಘಟನೆ ಮಾಡದೆ ತಾವೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ಕ್ಷೇತ್ರದ ಪ್ರಾಮಾಣಿಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ .ಇದಕ್ಕೆ ಯಾರು ತಲೆ ಕೆಡಿಸಿಕೊಳ್ಳಬಾರದು ಇದು ಕೆವಲ ಊಹಾಪೊಹ ಬರುವ ಚುನಾವಣೆಯಲ್ಲಿ ಪಕ್ಷ ಅಧಿಕೃತ ಅಭ್ಯರ್ಥಿ ನಾನೆ ಆಗಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಪತ್ರಿಕಾ ಹೇಳಿಕೆ ನೀಡಿದರು.

loading...