ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

0
28
loading...

ಕನ್ನಡಮ್ಮ ಸುದ್ದಿ- ಬೈಲಹೊಂಗಲ- ಮತಕ್ಷೇತ್ರದ ನಯಾನಗರ ಗ್ರಾಮದ ಬಸವೇಶ್ವರ ಯುವಕ ಮಂಡಳದ ಸದಸ್ಯರು ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು, ಯುವಕರು ಬಿಜೆಪಿ ತೊರೆದು ಮಾಜಿ ವಿಧಾನ ಪರಿಷತ್ತ್‌ ಸದಸ್ಯ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಕಾಂಗ್ರೇಸ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಖಂಡ ನಿಂಗನಗೌಡ ಖನ್ನೀನಾಯ್ಕರ ಮಾತನಾಡಿ, ನಯಾನಗರ ಗ್ರಾಮದಲ್ಲಿ ಮಹಾಂತೇಶ ಕೌಜಲಗಿ ಅವರ ಶಾಸಕ ಅಧಿಕಾರ ಅವಧಿಯಲ್ಲಿ ಬಸವಣ್ಣ ದೇವರ, ಹಣಮಂತ ದೇವರ, ಸುಖದೇವಾನಂದ ಮಠಕ್ಕೆ ಸಮದಾಯ ಭವನ, ರೈತರಿಗೆ ಸುಗಮವಾಗಿ ಜಮೀನುಗಳಿಗೆ ತೆರಳಲು ರಸ್ತೆ, ಸರಕಾರಿ ಹೈಸ್ಕೂಲ, ಸರಕಾರಿ ದವಾಖಾನೆ ಹಾಗೂ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದು ಮುಂದಿನ ದಿನಗಳಲ್ಲಿ ಅವರಿಂದ ಸಹಕಾರ ಬಯಸಿ ಕಾಂಗ್ರೇಸ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆವೆ ಎಂದರು.

ಹಸನಸಾಬ ನದಾಫ, ಸುರೇಶಗೌಡ ಖನೀನಾಯ್ಕರ, ಈರಪ್ಪ ಹುಣಶೀಕಟ್ಟಿ, ಕೃಷ್ಣ ನಲವಡೆ, ದಸ್ತಗೀರಸಾಬ ನದಾಫ, ಮಹಾಂತೇಶ ಅರವಳ್ಳಿ, ನಾಗಪ್ಪ ಮುತವಾಡ, ಶಿವನಪ್ಪ ಅಳಗೋಡಿ, ಭೀಮಶೇಪ್ಪ ದಳವಾಯಿ ಶಿವಪ್ಪ ಅಗಸಿಬಾಗಿಲ, ಬಸವರಾಜ ಮಡಿವಾಳರ, ನೀಲಕಂಠ ಹೊಸಮನಿ, ಬಹಾದ್ದೂರ ಅಳಗೋಡಿ, ಮಂಜುನಾಥ ಅಗಸಿಬಾಗಿಲ, ರಾಜು ಸೂರ್ಯವಂಶಿ, ರಾಯಪ್ಪ ಚಂದರಗಿ, ಬಾಲಪ್ಪ ವೇಂಕನ್ನವರ, ಚಂದ್ರಪ್ಪ ಪೂಜೇರ ಕಾಂಗ್ರೇಸ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೇಸ ಮುಖಂಡರಾದ ನ್ಯಾಯವಾದಿ ಪ್ರಕಾಶ ಸಂಗೋಳ್ಳಿ, ಯಲ್ಲಪ್ಪ ಹೂವಿನ, ಕೃಷ್ಣ ಯಲಿಗಾರ, ಈರಣ್ಣ ಉಗರಖೋಡ, ಚನ್ನಪ್ಪ ಹರ್ತಿ, ರವಿ ದಳವಾಯಿ, ಬಸವರಾಜ ಹಲಕಿ, ಭೀಮಶೇಪ್ಪ ಹುಡೇದ ಮುಂತಾದವರು ಇದ್ದರು.

loading...