ಬಿಜೆಪಿ ನಾಯಕರಿಗೆ ತತ್ವ, ಸಿದ್ದಾಂತ ಗೊತ್ತಿಲ್ಲ: ರಾಯರಡ್ಡಿ

0
38
loading...

ಯಲಬುರ್ಗಾ: ಬಿಜೆಪಿ ಪಕ್ಷದ ನಾಯಕರಿಗೆ ತತ್ವ, ಸಿದ್ದಾಂತ ಗೊತ್ತಿಲ್ಲ ವ್ಯಾಪರ ಮನೋಭಾವನೆ ಹೊಂದಿದ್ದಾರೆ. ಹಣ ಭ್ರಷ್ಟಚಾರ ಮಾಡಲು ಅಧಿಕಾರಿಕ್ಕಾಗಿ ಹವಣಿಸುತ್ತಿದ್ದಾರೆ. ಇಂತಹವರಿಗೆ ಮತದಾರ ಭಾಂದವರು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಮುಧೋಳ ಗ್ರಾಮದಲ್ಲಿ ಬುಧವಾರ ಮುಧೋಳ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ ಪರಿವರ್ತನಾ ರ್ಯಾಲಿಯ ಕಾರ್ಯಕ್ರಮಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ತಂದರೇ ಪ್ರಧಾನ ಮಂತ್ರಿ ನರೇಂದ್ರಮೋದಿ ಕಾಲಿಗೆ ಬಿದ್ದು ನೀರಾವರಿ ಯೋಜನೆಗೆ ಒಂದು ಲಕ್ಷ ಕೋಟಿ ಹಣ ತರುತ್ತೇನೆ ಎನ್ನುವ ಯಡಿಯೂರಪ್ಪ ಈಗಲೇ ಹೋಗಿ ಮೋದಿಯಿಂದ ಹಣ ಬಿಡುಗಡೆ ಮಾಡಿಸಿಕೊಂಡು ಬರಲಿ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇವೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಂಸ್ಕಾರ, ಸಂಸ್ಕøತಿ ಎಂಬುದು ಗೊತ್ತಿಲ್ಲ. ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ಎಸೆಗಿ ಜೈಲಿಗೆ ಹೋಗಿ ರಾಜ್ಯದ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಬಿಜೆಪಿಯ ಸಂಪುಟದ ಸಚಿವರು ಅತ್ಯಾಚಾರ, ಅವ್ಯವಾಹರ, ಅನಾಚಾರವೆಸಗಿ ಜೈಲಿಗೆ ಹೋಗಿದ್ದಾರೆ.
ಬ್ಲೂ ಪಿಲಂ ವಿಕ್ಷೀಸಿದ ಮಹಾನುಭವರಿಂದ ರಾಜಕೀಯ ಪಾಠ ಕಲಿಯುವ ಅಗತ್ಯತೆ ನನಗಿಲ್ಲ ಎಂದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ನಿತ್ಯ ಕೂಮುವಾದ ಬಿತ್ತುವುದೇ ಅವರ ಪ್ರಮುಖ ಕಾರ್ಯವಾಗಿದೆ. ಸಮಾಜದ ಸ್ವಾಸ್ಥ್ಯ ಹದಗೆಡಸಲು ಮುಂದಾಗಿದ್ದಾರೆ. ಚುನಾವಣೆಯಲ್ಲಿ ಕ್ರೈಂ ಬೋರ್ಡಿನ ಮೇಲೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಕೆಟ್ಟ ಕಾರ್ಯಕ್ಕೆ ಮುಂದಾಗಿದ್ದಾರೆ. ದೇಶ ಮತ್ತು ರಾಜ್ಯ ಒಡೆಯುವ ಶಾಂತಿ ನೆಮ್ಮದಿ ಹಾಳು ಮಾಡುವ ಕಾರ್ಯವನ್ನು ಬಿಜೆಪಿ ಪಕ್ಷ ಮಾಡುತ್ತಿದೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದೂಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ತಾಲೂಕಿನಿಂದ ಸಚಿವ ಬಸವರಾಜ ರಾಯರಡ್ಡಿಯವರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ತಾಲೂಕಿನಲ್ಲಿ ಕುಕನೂರು-ಯಲಬುರ್ಗಾ ಪಟ್ಟಣದಲ್ಲಿ ಕನಕ ಭವನ ನಿರ್ಮಾಣ ಅನುಧಾನ ಒದಗಿಸಿದ್ದಾರೆ. ಕುರಬ ಸಮುದಾಯದ ಭಾಂದವರು ರಾಯರಡ್ಡಿಯವರ ಕೈ ಬಲಪಡಿಸೋಣ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯರಾದ ಹೊಳಿಯಮ್ಮ ಪಾಟೀಲ, ಗಿರಿಜಾ ಸಂಗಟಿ, ಹನುಮಂತಗೌಡ ಚೆಂಡೂರು, ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ್, ಯಂಕಣ್ಣ ಯರಾಶಿ, ಪಪಂ ಅಧ್ಯಕ್ಷೆ ಜಯಶ್ರೀ ಅರಕೇರಿ, ಜಯಶ್ರೀ ಕಂದಕೂರು, ಕಾಸೀಂಸಾಬ ತಳಕಲ್, ಅಪ್ಪಣ್ಣ ಜೋಶಿ, ಸುಧೀರ ಕೊರ್ಲಳ್ಳಿ, ನಾಗರಾಜ ಕೊಳಜಿ, ಶಿವನಗೌಡ ದಾನರಡ್ಡಿ, ಬಸವರಾಜ ಪೂಜಾರ್, ಹನುಮಂತರಾವ್ ದೇಸಾಯಿ, ಛತ್ರಪ್ಪ ಚಲವಾದಿ, ಆನಂದ ಉಳ್ಳಾಗಡ್ಡಿ, ರೈಮಾನಸಾಬ ನಾಯಕ, ಬಸವರಾಜ ಈಳಿಗೇರ, ಮಹಾಂತೇಶ ಗಾಣಿಗೇರ, ಬಸವರಾಜ ನಿಡಗುಂದಿ, ಹೇಮರಡ್ಡಿ ರಡ್ಡೇರ ಇತರರು ಇದ್ದರು.

loading...