ಬೆಳೆದು ಬೆಳೆಸುವದು ಗೆಲವು: ಕವಿತಾ

0
22
loading...

ಗದಗ : ತುಳಿದು ಬೆಳೆಯುವದು ಗೆಲುವಲ್ಲ, ಬೆಳೆದು ಬೆಳೆಸುವದು ನಿಜವಾದ ಗೆಲವು ಸಂಘಟನೆಗಳಲ್ಲಿ ತೊಡಗಿಕೊಂಡಾಗ ನಾವು ಬೆಳೆಯುವದರ ಜೊತೆಗೆ ಎಲ್ಲರನ್ನು ಬೆಳೆಸುತ್ತ ಮುನ್ನಡೆಯಬೇಕೆಂದು ಗದಗ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕವಿತಾ ದಂಡಿನ ಹೇಳಿದರು.
ಅವರು ಗದಗ ಜಿಲ್ಲಾ ಲೇಖಕಿಯರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಯತ್ನದ ಫಲ ಯಾರು ಪಡೆಯುತ್ತಾರೆ ಎಂದು ಚಿಂತಿಸದೇ ನಮ್ಮ ಕರ್ತವ್ಯವನ್ನು ನಿಭಾಯಿಸಿದಾಗ ಯಶಸ್ಸು ನಮ್ಮದಾಗುತ್ತದೆ ಎಂದರು. ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವವನ್ನು ಜನೇವರಿ ಕೊನೆಯ ವಾರದಲ್ಲಿ ಮಾಡಲಾಗುವದು ರಾಜ್ಯದ ಆಯ್ದ ಕಯಿಯಿತ್ರರ ಕವನಗಳ ಹಾಗೂ ಸಾಧನೆಯ ಹಾದಿಯಲ್ಲಿ ಸಾಗಿದ ಎಲೆಮರೆಯ ಕಾಯಿಯಂತಿರುವ ಸಾಧಕ ಸಾಧಕಿಯರ ಪರಿಚಯವನ್ನು ಕವನ ಸಂಕಲನದಲ್ಲಿ ಅಳವಡಿಸಲಾಗಿದ್ದು ಪ್ರಕಟಣೆ ಕೊನೆಯ ಹಂತದಲ್ಲಿದೆ ಎಂದರು.
ಸುವರ್ಣಾ ವಸ್ತ್ರದ ಮಾತನಾಡಿ ಲೇಖಕಿಯರ ಸಂಘವು ಒಂದು ವರ್ಷದ ಅವಧಿಯಲ್ಲಿ ಹಲವಾರು ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶ್ಲ್ಯಾಘನೀಯವಾಗಿದೆ. ವಾರ್ಷಿಕೋತ್ಸವದಂದು ಸಾಧಕ ಸಾಧಕಿಯರಿಗೆ ಸನ್ಮಾನವು ಜರುಗಲಿದೆ ಎಂದರು. ಸುಧಾ ಬಂಡಾ ಮಾತನಾಡಿ ಕವನ ಸಂಕಲನಕ್ಕೆ ಹಣವನ್ನು ನಮೂದಿಸಿರುವದಿಲ್ಲ ಕವಿಯಿಯಿತ್ರಿಯರಿಗೆ ಉಚಿವಾಗಿ ಪುಸ್ತಕ ನೀಡುತ್ತಿದ್ದು ರಾಜ್ಯ ಸಂಘಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದರು.
ಸುಶೀಲಾ ಕೋಟಿ ಮಾತನಾಡಿ ಬರಲಿರುವ ದಿನಮಾನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಲೇಖಕಿಯರ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಂಚಾಲಕರಾಗಿ ಡಾ.ಬಿ.ಎನ್.ತಾರಾ, ಪ್ರಾ. ಪ್ರೇಮಾ ಹಂದಿಗೋಳ, ಪ್ರೊ.ಪ್ರಿಯಾಂಕಾ ನಡುವಿನಮನಿ, ಪ್ರೊ.ಮಂಜುಳಾ ಹೊಂಬಾಳಿ, ಪ್ರೊ.ಶಕುಂತಲಾ ಸಿಂಧೂರ, ವಿಜಯಲಕ್ಷ್ಮೀ ಹೊಳ್ಳಿಯವರ, ಸುಧಾ ಬಂಡಾ ಇವರನ್ನು ಆಯ್ಕೆ ಮಾಡಲಾಯಿತು. ವಾರ್ಷಿಕೋತ್ಸವ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಸುವರ್ಣಾ ವಸ್ತ್ರದ, ಕಸ್ತೂರಿ ಹಿರೇಗೌಡರ, ಮೀನಾಕ್ಷಿ ಬೆನಕಣ್ಣವರ, ಶೋಭಾ ಶಲವಡಿ, ಸಂಧ್ಯಾ ಕೋಟಿ, ಜ್ಯೋತಿ ಬೇಲೇರಿ, ಲಲಿತಾ ಉಮನಾಬಾದಿ, ಸುಲೋಚನಾ ಐಹೋಳಿ, ಶಾಂತಾ ಮುಂದಿನಮನಿ, ಸುಮಾ ಪಾಟೀಲ, ರತ್ನಕ್ಕ ಪಾಟೀಲ, ಜಯಶ್ರೀ ಹಿರೇಮಠ, ಸಂಗಮ್ಮ ಹಿರೇಮಠ ಇವರಿಗೆ ವಹಿಸಲಾಯಿತು. ಪ್ರಾರಂಭದಲ್ಲಿ ಅಕ್ಕಮ್ಮಾ ಗುರುಸ್ವಾಮಿಮಠ ಸ್ವಾಗತಿಸಿದರು, ಶೋಭಾ ದುರಗಣ್ಣವರ ನಿರೂಪಿಸಿದರು ಪೂಜಾ ಬೇವೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಲೀಲಾ ಯಚ್ಚಲಗಾರ, ಕವಿತಾ ಹಿರೇಮಠ, ಜಯಶ್ರೀ ಬಾಕಳೆ, ಪದ್ಮಾವತಿ ಬಡಿಗೇರ, ಶಕುಂತಲಾ ಯಚ್ಚಲಗಾರ, ಗಿರೀಜಾ ಯಕ್ಕುಂಡಿ, ನಂದಾ ಸಂಗನಾಳ, ಪೂರ್ಣಿಮಾ ಮಲ್ಲಣ್ಣನವರ, ಜಯಶ್ರೀ ಹೆಬಸೂರ, ಮಂಗಳಾ ಬೇಲೇರಿ, ಛಾಯಾ ಪಟ್ಟಣಶೆಟ್ಟಿ ಪಾಲ್ಗೋಂಡಿದ್ದರು.

loading...