ಬೇಡಿಕೆ ಪುರಸ್ಕರಿಸದಿದ್ದರೆ ಪ್ರತಿಭಟನೆ: ರಾಮಚಂದ್ರ

0
23
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ತಮ್ಮ ಉಪ ಜೀವನಕ್ಕಾಗಿ ಅನೇಕ ಬಡ ರೈತರು ಅರಣ್ಯ ಅತಿಕ್ರಮಣ ಮಾಡಿ ಫಸಲು ಬೆಳೆಸುತ್ತಿರುವ ಜಮೀನುಗಳನ್ನು ಸಕ್ರಮಗೊಳಿಸುವಂತೆ ಈಗಾಗಲೇ ಡಿ.26 ರಿಂದ ಹಳಿಯಾಳದಿಂದ ಪಾದಯಾತ್ರೆ ಹೊರಟು ಡಿ.30 ರಂದು ಸರ್ಕಾರಕ್ಕೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ತಮ್ಮ ಈ ಬೇಡಿಕೆ ಪುರಸ್ಕರಿಸದಿದ್ದರೆ ಮತ್ತೆ ಪ್ರತಿಭಟನೆ ಮಾಡುವದಾಗಿ ದಲಿತ ಸಂಘರ್ಷ ಸಮಿತಿ (ಕೆಂಪು ಸೇನೆ) ಸಂಘಟನೆ ತಿಳಿಸಿದೆ.
ಈ ಕುರಿತು ಸಂಘಟನೆಯ ಮುಖಂಡ ವ್ಹಿ.ಬಿ. ರಾಮಚಂದ್ರ ಹಾಗೂ ಇನ್ನಿತರರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅತಿಕ್ರಮಣ ಮಾಡಿದ ರೈತರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ತನ್ಮೂಲಕ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕಾಗಿದೆ ಎಂದು ಆಗ್ರಹಿಸುವದಾಗಿ ತಿಳಿಸಿದ ಅವರು ಶೀಘ್ರ ಈ ಬೇಡಿಕೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೆ ಸಮಸ್ತ ಅತಿಕ್ರಮಣ ರೈತರೊಂದಿಗೆ ಪ್ರತಿಭಟನಾರ್ಥವಾಗಿ ಬೆಂಗಳೂರುವರೆಗೆ ಪಾದಯಾತ್ರೆಯ ಮೂಲಕ ತೆರಳುವುದಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶಿವಾಜಿ ಮಂಗೇಶ್ಕರ, ಲಕ್ಷ್ಮಣ ದನಗಾರ, ಚಂದ್ರಕಾಂತ ಬೋವಿವಡ್ಡರ್‌, ಅಶೋಕ ಕೆಸರೇಕರ, ಮುಬಾರಕ ಮತ್ತೆ, ಕೈತಾನ ಕಮ್ರೇಕರ, ಸುಭಾಸ ಜಾಧವ, ಮುಕುಂದ ಕಿನಗೇಕರ, ರಾಜು ಕುರುಬರ, ಹನುಮಂತ ಹರಿಜನ, ಸೈಯದಸಾಬ ಹವಾಲ್ದಾರ, ಜುಮಾಸಾಬ ದಾವಲಸಾಬ ಪಾಟೀಲ, ಅಬ್ದುಲ ಸತ್ತಾರ, ರಾಮಪ್ಪಾ ತೇಗೂರ ಮೊದಲಾದವರು ಇದ್ದರು.

loading...