ಭಂಡಾರಿ ಸಮಾಜದಿಂದ ವಾರ್ಷಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ

0
24
loading...

ಕನ್ನಡಮ್ಮ ಸುದ್ದಿ-ಕಾರವಾರ: ತಾಲೂಕಾ ಭಂಡಾರಿ ಸಮಾಜೋನ್ನತಿ ಸಂಘ ಕಾರವಾರ ಇವರ ನಂದನಗದ್ದಾದಲ್ಲಿರುವ ಸಮಾದೇವಿ ಸಭಾ ಭವನದಲ್ಲಿ 2016-2017ನೇ ಸಾಲಿನ ವಾರ್ಷಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರವನ್ನು ಮಾರುತಿ ಎಮ್‌. ಪಾಟೀಲ, ಕೈಗಾರಿಕಾ ಉದ್ಯಮಿ ಅಂಕಲೇಶ್ವರ ಇವರು ಉದ್ಘಾಟಿಸಿದರು.
ಬಳಿಕ ಮಾತನಾಡಿದವರು ಸಮಾಜದ ಬಡ ಮಕ್ಕಳಿಗೆ ವಿದ್ಯಾವಂತರಾಗಿ ಮಾಡಬೇಕು, ಸಮಾಜದ ಮಕ್ಕಳು ಓದಿ ಮುಂದೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರಬೇಕೆಂದು ಹಿತ ವಚನ ನೀಡಿದರು. ಮುಖ್ಯಅತಿಥಿಗಳಾದ ಸಮೀರ ಎನ್‌. ನಾಯ್ಕ ಕರ್ನಾಟಕ ಕಾಂಪೋಸ್ಟ್‌ ಅಭಿವ್ರದ್ದಿ ನಿಗಮ ನಿಯಮಿತ ಬೆಂಗಳೂರು(ಶೇಜವಾಡ) ಇವರು ಸಮಾಜದ ಏಳಿಗೆ ಹೆಚ್ಚಾಗಬೇಕಾದರೆ ಸಮಾಜದ ಬಾಂಧವರು ಒಮ್ಮನಸಿನಿಂದ ದುಡಿಯಬೇಕು. ಅದಕ್ಕೆ ನನ್ನಿಂದ ಆದಷ್ಟು ಪ್ರಯತ್ನ ಮಾಡಿ ಇನ್ನೂ ಮುಂದೆ ನಮ್ಮ ತಾಲೂಕಿನ ನಾನಾಕಡೆ ಸಂಘದ ಘಟಕಗಳು ಪ್ರಾರಂಭಿಸುತ್ತೇನೆ ಎಂದು ಘೋಷಿಸಿದರು.
ಚಿದಾನಂದ ಭಂಡಾರಿ ಕಾರ್ಯದರ್ಶಿ ಹೊನ್ನಾವರ ತಾಲೂಕಾ ಇವರು ನಮ್ಮ ಜಾತಿಗೆ ಪ್ರವರ್ಗ 2ಎ ದಿಂದ ಪ್ರವರ್ಗ 1ಕ್ಕೆ ಮಾಡಲು ಸರ್ಕಾರಕ್ಕೆ ಮನವಿಯನ್ನು ಕಳುಹಿಸಿ ಕೊಡಬೇಕೆಂದು ಸಭೆಯಲ್ಲಿ ಹೇಳಿದರು. ಇದರಿಂದ ಸಮಾಜದ ಮಕ್ಕಳಿಗೆ ಅನುಕೂಲವಾಗುವುದೆಂದು ಹೇಳಿದರು.
1 ರಿಂದ 10ನೇ ಹಾಗೂ ಅಂತಿಮ ಪಿ.ಯು.ಸಿ ಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಾಜದ ವತಿಯಿಂದ ಸಮಾಧಾನಕರ ನಗದು ಪುರಸ್ಕಾರ ನೀಡಲಾಯಿತು.
ಆನಂದ ನಾರಾಯಣ ಮಾಂಜ್ರೇಕರ ಇವರಿಗೆ ಸಮಾಜದ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆ ಸಂಘದ ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ಶ್ರೀ ಕಿಶೋರ ವಿ. ಕಿಂದಳಕರ ದಾಂಡೇಲಿ ಇವರಿಂದ ಮಾಡಲಾಯಿತು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

loading...