ಭಕ್ತರನ್ನು ಯಶಸ್ಸಿನತ್ತ ಕೊಂಡೊಯುವದು ಶ್ರೀಮಠದ ಧ್ಯೇಯ

0
27
loading...

ಮುಗಳಖೋಡ 03: ಇಂದು ಸುಕ್ಷೇತ್ರ ಮುಕ್ತಿ ಮಂದಿರ ಮುಗಳಖೋಡವು ವಿಶ್ವದ ಜನರು ಬಂದು ನೋಡುವ ಮಟ್ಟಿಗೆ ಅಭಿವೃದ್ದಿ ಹೊಂದಿದೆ ಎಂದರೆ ಇದಕೆಲ್ಲ ಇಂದಿನ ಪೀಠಾಧಿಪತಿಗಳಾದ ಡಾ. ಶ್ರೀ ಮುರುಘರಾಜೇಂದ್ರ ಶ್ರೀಗಳ ನಿರಂತರ ಬಿಡುವಿಲ್ಲದ ಪರಿಶ್ರಮವೇ ಕಾರಣÀವೆಂದು ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆಯ ಬಸವ ಪುರಾಣದ ವೇದಿಕೆಯಲ್ಲಿ 1008 ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾಧಕರು ಶ್ರೀಶೈಲ ಪೀಠ ಶ್ರೀಶೈಲ ಪರಮ ಪೂಜ್ಯರು ಮಾತನಾಡಿದರು. ದಿವ್ಯ ನೇತೃತ್ವವನ್ನು ಉಪಾಚಾರ್ಯ ರತ್ನ ಶ್ರೀ ಷಟಸ್ಥಲಿ ಬ್ರಹ್ಮಿ ತೋಟೆಂದಾಂiÀiರ್ ಶಿವಾಚಾರ್ಯ ನಾಲವಾರ ವಹಿಸಿಕೊಂಡಿದ್ದರು. ಶ್ರೀ ಸಿದ್ದರಾಮ ಶಿವಾಚಾಂiÀiರ್ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಈ ಕಾರ್ಯದಲ್ಲಿ ಇನ್ನು ಹರಗುರು ಚರÀಮೂರ್ತಿಗಳು ಭಾಗವಹಿಸಿದ್ದರು ಡಾ. ಶ್ರೀ ಮುರುಘರಾಜೇಂದ್ರ ಶ್ರೀಗಳು ಕಾಯಕ ಮಾಡುವದೇ ನಮ್ಮ ಕಾರ್ಯ, ಎಲ್ಲವು ಯಶಸ್ಸಿನತ್ತ ಕೊಂಡೊಯುವದು ಶ್ರೀ ಮಠದ ತ್ರಿಶಕ್ತಿಯೇ ಕಾರಣವೆಂದು ಆಶೀರ್ವಚನ ನೀಡಿದರು.

loading...