ಭರತನಾಟ್ಯದಂತಹ ಅಪ್ಪಟ ಕಲೆ ದೇಶದ ಆಸ್ತಿ: ಹೇಮಾ

0
29
loading...

ಕನ್ನಡಮ್ಮ ಸುದ್ದಿ-ಶಿರಸಿ: ನಗರದ ಟಿ.ಎಂ.ಎಸ್‌.ಸಭಾಭವನದಲ್ಲಿ ‘ನೂಪುರನಾದ’ ನೃತ್ಯಶಾಲೆಯ 9ನೇ ವರ್ಷದ ವಾರ್ಷಿಕ ನೃತ್ಯೋತ್ಸವ ಯಶಸ್ವಿಯಾಗಿ ಜರುಗಿತು.
ನೃತ್ಯೋತ್ಸವವನ್ನು ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತೆ ಹೇಮಾ ಹೆಬ್ಬಾರ ಮಾತನಾಡಿ, ಭರತನಾಟ್ಯದಂತಹ ಅಪ್ಪಟ ಕಲೆ ದೇಶದ ಆಸ್ತಿ. ಸದಭಿರುಚಿಯನ್ನು ಬೆಳೆಸುವ ಇಂತಹ ಕಲೆಯನ್ನು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಬೇಕು ಎನ್ನುತ್ತಾ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಈ ವೇಳೆ ಕಲಾವಿದರಾದ ಜಿ.ಎನ್‌.ಹೆಗಡೆ ಹಾವಳೀಮನೆ ದಂಪತಿಗೆ ಸಮ್ಮಾನ ಮಾಡಲಾಯಿತು. ಮನುವಿಕಾಸ ಸಂಸ್ಥೆಯ ಗಣಪತಿ ಭಟ್ಟ ಕರ್ಜಗಿ ಅಧ್ಯಕ್ಷತೆ ವಹಿಸಿ, ನಾಡು, ನುಡಿಯ ಏಳ್ಗೆಗೆ ಕಲೆಯ ಪಾತ್ರ ಮಹತ್ತರವಾದದ್ದು ಎಂದರು. ಡಿ.ಎಸ್‌.ನಾಯ್ಕ ಸಂಮಾನ ಪತ್ರ ವಾಚಿಸಿದರೆ, ನೂಪುರ ನೃತ್ಯಶಾಲೆಯ ಗುರು ವಿದುಷಿ ಅನುರಾಧಾ ಹೆಗಡೆ ಸ್ವಾಗತಿಸಿದರು. ಕನ್ನಪ್ಪ ಮಾಸ್ತರ ವರದಿ ವಾಚಿಸಿದರು. ವಿದುಷಿ ಜಯಶ್ರೀ ಹೆಗಡೆ ವಂದಿಸಿದರು. ವೀಣಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ನೃತ್ಯೋತ್ಸವದಲ್ಲಿ 75 ವಿದ್ಯಾರ್ಥಿಗಳು ಪಾಲ್ಗೊಂಡರು. ನಟುವಾಂಗದಲ್ಲಿ ವಿದೂಷಿ ಅನುರಾಧಾ ಹೆಗಡೆ ಹಾಗೂ ಕೀರ್ತನಾ ಹೆಗಡೆ, ಗಾಯನದಲ್ಲಿ ವಿದೂಷಿ ಜಯಶ್ರೀ ಅಜಯಕುಮಾರ್‌ ಬೆಂಗಳೂರು ಮತ್ತು ಸುರೇಶ ಹಕ್ಕೀಮನೆ, ವಾಯಲಿನ್‌ನಲ್ಲಿ ವಿದ್ವಾನ್‌ ಚಂದನನಕುಮಾರ್‌ ಮೈಸೂರು, ಮೃದಂಗ ಹಾಗೂ ರಿದಂ ಪ್ಯಾಡ್‌ ವಿ. ಅರುಣಕುಮಾರ್‌, ಬೆಂಗಳೂರು, ಕೊಳಲು ವಿದ್ವಾನ್‌ ಚಂದ್ರಶೇಖರ ಬೆಂಗಳೂರು ಸಾಥ್‌ ನೀಡಿದರು.

loading...