ಭರಮಣ್ಣಾ ಪೂಜೇರಿಗೆ ಕನಕಶ್ರೀ ಚೇತನ ಪ್ರಶಸ್ತಿ

0
17
loading...

ಭರಮಣ್ಣಾ ಪೂಜೇರಿಗೆ ಕನಕಶ್ರೀ ಚೇತನ ಪ್ರಶಸ್ತಿ

ಕನ್ನಡಮ್ಮ ಸುದ್ದಿ
ಸಂಕೇಶ್ವರ 12:ಪಟ್ಟಣದ ಯುವ ಮುಖಂಡರು ಸಮಾಜ ಸೇವಕರಾದ ಭರಮ್ಮಣಾ ಪೂಜೇರಿ ಅವರಿಗೆ ಪ್ರತಿಷ್ಠಿತ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ದೊರೆತಿದೆ.
ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಮಾಡಿರುವವರನ್ನ ಈ ಸಂಸ್ಥೆ ಗುರುತಿಸಿ ಈ ಪ್ರಶಸ್ತಿ ನೀಡುತ್ತದೆ.ಶಿವಮೊಗ್ಗದಲ್ಲಿ ನಡೆದ ಸಂಸ್ಥೆಯ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಂಸ್ಥೆಯ ಅದ್ಯಕ್ಷರಾದ ಏ.ಹೆಚ್.ಶ್ಯಾಮಲಾ  ಭರಮ್ಮಣ್ಣಾ ಪೂಜೇರಿ ಅವರಿಗೆ ಪ್ರಶಸ್ತಿ ನಿಡಿ ಗೌರವಿಸಿದ್ದಾರೆ.
ಶಿವಮೊಗ್ಗದ ಪತಂಜಲಿ ಯೋಗ ಮತ್ತು ಪಕೃತಿ ಸಂಸ್ಥೆಯವರು ನೀಡುವ ಈ ಕನಕಶ್ರೀ ಪ್ರಶಸ್ತಿಗೆ ತಾಲೂಕಿನ ಹಾಲುಮತ ಮುಖಂಡರಾದ ಭರಮ್ಮಣ್ಣಾ ಪೂಜೇರಿ ದೊರೆತಿರುವುದುದಕ್ಕೆ ಸಮಸ್ತ ತಾಲೂಕಿನ ಹಾಲುಮತ ಸಮಾಜ ಮತ್ತು ಸಂಕೇಶ್ವರ ಪಟ್ಟಣದ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.

loading...