ಭಾರತ ಸರ್ವ ಧರ್ಮಗಳ ಭಾವೈಕ್ಯತೆಯ ಗೂಡು: ಸೈಯ್ಯದ್‌

0
17
loading...

ಕನ್ನಡಮ್ಮ ಸುದ್ದಿ-ಹುನಗುಂದ: ಭಾರತವು ಸರ್ವ ಧರ್ಮಗಳ ಭಾವೈಕ್ಯತೆಯ ದೇಶವಾಗಿದ್ದು. ಅಧರ್ಮ ಅಪನಂಬಿಕೆಯಿಂದ ಜಾತಿ ವೈಷಮ್ಯದಿಂದ ಧರ್ಮಗಳ ಸಾರ ಅರಿಯದೇ ಬದುಕು ಸಾಗಿಸಿದರೇ ಭವಿಷ್ಯದ ದಿನಗಳಲ್ಲಿ ನಾವು ದುಸ್ತರ ಜೀವನ ಸಾಗಿಸಬೇಕಾಗುತ್ತದೆ ಮನಸ್ಸಿನ ಪರಿವರ್ತನೆಗೆ ಧರ್ಮ ಸಮ್ಮೇಳನ ಅವಶ್ಯ ಎಂದು ತೆಲಂಗಾಣದ ಪಂಡಿತ ಮೌಲಾನ ಸೈಯ್ಯದ್‌ ಬಾಷಾ ಹೇಳಿದರು.
ನಗರದ ಹಜರತ್‌ ಸೈಯ್ಯದ್‌ಅಬ್ದುಲ್‌ಖಾದರ್‌ ಜಿಲಾನಿ ಮೆಹೆಬೂಬ ಸುಬಾನಿ ಉರುಸಿನ ಅಂಗವಾಗಿ ನಡೆದ ಸೂಫಿ ಸಂತರ ಶಾಂತಿ ಸರ್ವ ಸಮ್ಮೇಳನದ ಪ್ರವಚನಕಾರಾಗಿ ಮಾತನಾಡಿದ ಅವರು ಧರ್ಮದಲ್ಲಿ ಅಧರ್ಮ. ಅಸತ್ಯಗಳು ಹೆಚ್ಚಾಗಿದೆ. ಮಂತ್ರ, ವಚನ, ಭಗವದ್ಗೀತೆ, ಖುರಾನ,ಸಂದೇಶ ಒಂದೆಯಾದರೂ ಆಚರಣೆ, ಭಾಷೆ, ವೇಷ, ಭೂಷಣ ಬದಲಿದೆ ಹೊರತು ಧರ್ಮದ ಸಾರಗಳು ಬದಲಾಗಿಲ್ಲ.
ಬೇರೆಯವರ ಒಡೆದಾಳುವ ನೀತಿಯಿಂದ ನಮ್ಮ ದೇಶದಲ್ಲಿ ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ,ಈ ರೀತಿ ಮುಂದುವರೆದರೇ ಜಾತಿ ಜಾತಿಗಳ ಮತ್ತು ಧರ್ಮ ಧರ್ಮಗಳ ಮಧ್ಯೆ ವೈಷಮ್ಯಗಳು ಬೆಳೆದು ಮುಂಬರುವ ದಿನಗಳಲ್ಲಿ ಅಪಾಯ ಹಂಚಿಗೆ ಬರುವುದು. ಅದಕ್ಕೆ ನಾವೆಲ್ಲ ದೇಶವಾಸಿಗಳು ದೇಶ ಸಂರಕ್ಷಣೆಗೆ ಧರ್ಮದ ಮಾರ್ಗದಲ್ಲಿ ನಡೆಯಬೇಕಾಗಿದೆ. ಭಾರತ ಧಾರ್ಮಿಕ ದೇಶ. ಈ ಮಣ್ಣಿನಲ್ಲಿ ಅಂತಹ ಗುಣವಿದೆ. ನಾವೆಲ್ಲ ಹಿಂದೂ- ಮುಸ್ಲಿಂ ಒಂದೇ ದೇಶವಾಸಿಗಳು ಅಖಂಡ ಸರ್ವ ಸಂಪನ್ನ ದೇಶ ನಮ್ಮದು. ಜಾತಿ ಎರಡೇ ಅದು ಗಂಡು-ಹೆಣ್ಣು, ಉಳಿದಿದ್ದು ಅಡ್ಡಜಾತಿ. ಸ್ವರ್ಗ ಸಮಾನ ನಮ್ಮ ಭಾರತದಲ್ಲಿ ಹಿಂದೂ ಮುಸ್ಲಿಂ ಒಂದಾಗಿ ಬಾಳಬೇಕಾಗಿದೆ.ಯಾರ ಏನೇ ಮಾಡಿದರೂ ಭಾವೈಕ್ಯತೆಯನ್ನು ಕೆಡಿಸಲು ಸಾಧ್ಯವಿಲ್ಲ ಎಂದರು.

ಡಾ. ಮಹಾಂತ ಶಿವಯೋಗಿಗಳು, ಜಯ ಬಸವ ಮೃತ್ಯುಂಜಯ ಶ್ರೀಗಳು, ದೊಡ್ಡ ಲಾಲಸಾಬ ಅಜ್ಜ, ಅಂಕಲಿಮಠದ ವೀರಭದ್ರ ಸ್ವಾಮಿಗಳು, ಹಜರತ್‌ ಸೈಯ್ಯದ್‌ಖಾಜಾ ಅಮೀನ ಪೀರಜಾ, ಹಜರತ್‌ ಮೌಲಾನ ಮುಪ್ತಿ ಮಹ್ಮದ ಅಬುಬಕರ ಸಕಾಫಿ ಸಾಹೇಬ್‌ ಸಾನಿಧ್ಯ ವಹಿಸಿದ್ದರು. ಶೇಖರಪ್ಪ ಬಾದವಾಡಗಿ, ಅಂಜುಮನ್‌ ಕಮೀಟಿ ಅಧ್ಯಕ್ಷ ಶಬ್ಬೀರ್‌ ಮೌಲಿ, ಭಾಗವಹಿಸಿದ್ದರು.

loading...