ಮತದಾನ ಉತ್ತಮ ಆಡಳಿತಕ್ಕೆ ಬುನಾದಿ : ಮನೋಜ್‌ ಜೈನ್‌

0
29
loading...

ಗದಗ: ಮತದಾರ ಪಟ್ಟಿಯಲ್ಲಿರುವ ಎಲ್ಲರೂ ಮತ ಚಲಾಯಿಸಬೇಕು ಎನ್ನುವ ಜನಜಾಗೃತಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಹಮ್ಮಿಕೊಳ್ಳಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಹೇಳಿದರು.
ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಭಾರತ ಚುನಾವಣಾ ಆಯೋಗದ £ರ್ದೇಶನದ ಮೇರೆಗೆ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ದೇಶದಲ್ಲಿ ಸಾಕ್ಷರತೆ ಸರಾಸರಿ ಶೇ. 74 ರಷ್ಟು ಹಾಗೂ ಕರ್ನಾಟಕದ ರಾಜ್ಯದಲ್ಲಿ ಶೇ. 75.6 ರಷ್ಟು ಇದ್ದರೂ ಬಹುತೇಕ ಸಂದರ್ಭದಲ್ಲಿ ಶೇ. 20.70 ರಷ್ಟು ಮತದಾನ ಆಗದ ಪ್ರಕರಣಗಳನ್ನು ನಾವು ಕಾಣುತ್ತೇವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಉತ್ತಮ ಆಡಳಿತದ ಮೂಲಬುನಾದಿಯೇ ಮತದಾನ. ಆದುದರಿಂದ ಜನತೆ ಅದರಲ್ಲೂ ಯುವಜನ ಹೆಚ್ಚಿನ ಸಂಖ್ಯೆಯಲ್ಲಿ ಸ್ವತಃ ಮತ ಹಾಕಬೇಕು. ಇತರರನ್ನು ಮತದಾನ ಮಾಡಲು ಪ್ರೇರೇಪಿಸಬೇಕು.
ಮತದಾನ ಕುರಿತು ನಕರಾತ್ಮಕ ಮನೋಭಾವ ಬಿಟ್ಟು ತಮಗೆ ಆಯ್ಕೆ ಸರಿ ಇಲ್ಲದಿದ್ದರೂ ನೋಟಾ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಆದುದರಿಂದ ಅರ್ಹ ಮತದಾರರೆಲ್ಲರೂ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತಾಧಿಕಾರ ಚಲಾಯಿಸಬೇಕು ಎಂದರು. ಕೆ.ವಿ.ಎಸ್‌.ಆರ್‌. ಕಾಲೇಜಿನ ರಾಜ್ಯ ಶಾಸ್ತ್ರದ ಉಪನ್ಯಾಸಕ ಜಿ.ಎಂ. ಹಕಾರಿ ಮಾತನಾಡಿ ಸಶಕ್ತ ಪ್ರಜಾಪ್ರಭುತ್ವ ಕಟ್ಟಲು ಉತ್ತಮ ಮತದಾನ ಅವಶ್ಯ. ಸುಭದ್ರ ರಾಷ್ಟ್ರ £ರ್ಮಾಣಕ್ಕೆ ಕೈ ಜೋಡಿಸಬೇಕು. ಭಾರತವು ಅತೀ ಹೆಚ್ಚು ಯುವ ಮತದಾರರನ್ನು ಹೊಂದಿದ ದೇಶವಾಗಿದೆ. ಮತದಾರರು ತಮ್ಮ ಹೊಣೆಗಾರಿಕೆ ಜವಾಬ್ದಾರಿ ನಿರ್ವಹಿಸಬೇಕು.
ಸಮಾಜ ಮುಖಿಯಾಗಿ ಸಮರ್ಥ ವ್ಯಕ್ತಿ ಆಯ್ಕೆ ಮಾಡಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ವರ ಪಾಲ್ಗೊಳ್ಳುವಿಕೆ ಅಗತ್ಯ. ಸಕಾರಾತ್ಮಕ ಭಾವನೆಯಿಂದ ಮತದಾನದಲ್ಲಿ ಪಾಲ್ಗೊಂಡು ಶಾಂತಿ ಹಾಗೂ ನ್ಯಾಯಯುತ ಮತದಾನ ಮಾಡಿ ಸುಭದ್ರ ರಾಷ್ಟ್ರ ಕಟ್ಟುವುದು ಅವಶ್ಯವಾಗಿದೆ ಎಂದು ಜಿ.ಎಂ. ಹಕಾರಿ ನುಡಿದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್‌.ಜಿ.ಪಲ್ಲೇದ ಅವರು ಮಾತನಾಡಿ ಸಶಕ್ತ ದೇಶದ ಆಡಳಿತಕ್ಕೆ ಪ್ರಜಾಪ್ರಭುತ್ವ ಅವಶ್ಯ. ಮತದಾನ ಹಕ್ಕು ಮತ್ತು ಕರ್ತವ್ಯ. ಹಕ್ಕು ಪಡೆದು ಕರ್ತವ್ಯ ವಿಮುಖರಾಗದೇ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಇಂದಿನ ಯುವಕರು ನಾಳಿನ ಭಾವೀ ಜನಾಂಗದ ನಾಯಕರು. ಮತದಾರರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನಾಚರಣೆ ಏರ್ಪಡಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ಮಾತನಾಡಿ 1950 ಜನೆವರಿ 25, ರಂದು ಚುನಾವಣಾ ಆಯೋಗವು ಅಸ್ತಿತ್ವಕ್ಕೆ ಬಂದಿತು. 2011 ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಗ್ರಾಮಿಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾನಕ್ಕೆ ಸಮಯಾವಕಾಶ ಕಲ್ಪಿಸಿಕೊಂಡು ಯೋಗ್ಯ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಪ್ರಬಂಧ, ರಸಪ್ರಶ್ನೆ, ಪೋಸ್ಟರ್‌, ಕೋಲ್ಯಾಜ್‌ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿ£ಯರಿಗೆ ಬಹುಮಾನ ವಿತರಿಸಲಾಯಿತು. ಮತದಾರ ನೊಂದಣಿ ಕಾರ್ಯದಲ್ಲಿ ಉತ್ತಮ ಕಾರ್ಯ£ರ್ವಹಿಸಿದ ಮತದಾರ ನೋಂದಣಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪ್ರಶಸ್ತಿ £ೕಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಹಸ್ರಮಾನದ ಮತದಾರರು (ಮಿಲೇನಿಯಂ ವೋಟರ್ಸ) ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಗುರುತಿನ ಚೀಟಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಯೋಜನಾ ನಿರ್ದೇಶಕ ಟಿ. ದಿನೇಶ, ಸಹಸ್ರಮಾನದ ಮತದಾರ ದಾದಾಹಯಾತ್‌ ಹಳೆಮಸೂತಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಸಿದ್ಧಲಿಂಗನಗರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸ್ವಾಗತಿಸಿದರು ಹಾಗೂ ಮತದಾನ ಕುರಿತು ಪ್ರತಿಜ್ಞ್ಞಾ ವಿಧಿ ಬೋಧಿಸಿದರು. ಉಪವಿಭಾಗಾಧಿಕಾರಿ ಪಿ.ಎಸ್‌. ಮಂಜುನಾಥ ವಂದಿಸಿದರು. ಶ್ಯಾಮಲಾ ಸೋಳಂಕಿ ಹಾಗೂ ವಿ.ಡಿ.ಅಡಕೆ ಕಾರ್ಯಕ್ರಮ ನಿರೂಪಿಸಿದರು. ನಂತರ ಗದಗ ಜಿಲ್ಲಾಡಳಿತ ಭವನದ ಎದುರಿಗೆ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಜನಜಾಗೃತಿಗಾಗಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚಿಸಲಾಯಿತು.

loading...