ಮದರಸಾ ವಿದ್ಯಾರ್ಥಿಗಳಿಗೆ ಬ್ಲಾಂಕೇಟ್‌ ವಿತರಣೆ

0
15
loading...

ಗದಗ : ಗದಗ ವಿವೇಕಾನಂದ ನಗರದ ದಾರುಲ್‌ ಅಬ್ರಾರ್‌ ಮದರಸಾದ ಸುಮಾರು 80 ವಿದ್ಯಾರ್ಥಿಗಳಿಗೆ ಗದುಗಿನ ಜೈನ್‌ ಸಮಾಜದಿಂದ 80ಕ್ಕೂ ಹೆಚ್ಚು ಬ್ಲಾಂಕೇಟ್‌ (ರಗ್ಗು) ಹೋದಿಕೆಗಳನ್ನು ಶುಕ್ರವಾರ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ಧುರೀಣ ಪ್ರಾಣಿ ದಯಾ ಸಂಘದ ಮುಖಂಡ ಮಹೇಶ ಕೋಟಿ ಅವರು ಮಾತನಾಡಿ ಕೆಲವೆಡೆ ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಿಯರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾಗಿ ಮನಸ್ಸು ಒಡೆಯುವ ಕಾರ್ಯ ನಡೆಯುತ್ತಿದ್ದರೆ ಇಲ್ಲಿ ಮನಸ್ಸುಗಳನ್ನು ಬೆಸೆಯುವ ಕಾರ್ಯ ನಡೆದಿದೆ. ಸರ್ವ ಸಮಾಜದವರನ್ನೂ ಒಂದು ಎಂಬ ತತ್ವದಡಿ ಇಲ್ಲಿನ ಜೈನ ಸಮಾಜಬಾಂಧವರು ಮಾನವೀಯ ಕಾರ್ಯ ಕೈಗೊಂಡಿದ್ದಾರೆ, ಈ ನಿಟ್ಟಿನಲ್ಲಿ ಜೈನ್‌ ಸಮಾಜದ ಮುಖಂಡರಾದ ಶೈಲೇಶ್‌ ಬಾಗಮಾರ, ಜಯಂತ ಕವಾಡ ಹಾಗೂ ಅವರ ಗೆಳೆಯರ ಬಳಗವು ಮುಸ್ಲಿಂ ಬಾಂಧವರ ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ಕಾಣುವ ಮೂಲಕ ಅವರಿಗೆ ನೆರವಾಗಿರುವದು ಶ್ಲ್ಯಾಘನೀಯ ಎಂದರು. ಮೌಲಾನಾ ಜಕ್ರೀಯಾ ಖಾಜಿ ಅವರು ಮಾತನಾಡಿ ಜೈನ ಸಮಾಜಬಾಂಧವರು ಮದರಸಾದ ವಿದ್ಯಾರ್ಥಿಗಳ ಉಪಯೋಗಕ್ಕಾಗಿ 80ಕ್ಕೂ ಹೆಚ್ಚು ರಗ್ಗುಗಳನ್ನು ಉಡುಗೋರೆಯಾಗಿ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ. ಮಕ್ಕಳು ಶಿಕ್ಷಣ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಶೃದ್ಧೆಯಿಂದ ಅಧ್ಯಯನ ಮಾಡಿ ಭವಿಷ್ಯದಲ್ಲಿ ಮುನ್ನಡೆ ಸಾಧಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ಸ್‌ ಕ್ಲಬ್‌ ಡಿಸ್ಟ್ರೀಕ್ಟ ಚೇರಮನ್‌ ಸೈಯಿಸ್‌ ಲಾವಂದೆ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಶೈಲೇಶ ಶಹಾ ಅವರು ಮಾತನಾಡಿ ತಮ್ಮ ಕ್ಲಬ್‌ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದ್ದು ಮದರಸಾದ ವಿದ್ಯಾರ್ಥಿಗಳಿಗೆ ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ ಆಯ್ದ ಶಾಲೆಗಳ ವಿದ್ಯಾರ್ಥಿಗಳಿಗೆ ಚೆಂಡು ಹಾಗೂ ಸ್ಕೀಪಿಂಗ್‌ ಹಗ್ಗದಾಟದ ಸಾಮಗ್ರಿ ಸ್ಕೀಪಿಂಗ್‌ಗಳನ್ನು ಪೂರೈಸಲಾಗುತ್ತಿದೆ ಎಂದರು.
ಕಾಂಗ್ರೇಸ್‌ ಧುರೀಣ ಅಬ್ದುಲ್‌ರೆಹಮಾನ್‌ ಹುಯಿಲಗೋಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜೈನ್‌ ಸಮಾಜಬಾಂಧವರ ಕಾರ್ಯವನ್ನು ಸ್ವಾಗತಿಸಿದರಲ್ಲದೆ ಇಂತಹ ಕಾರ್ಯ ಎಲ್ಲೆಡೆಯೂ ನಡೆಯಲಿ ಎಂಬ ಸದಾಶಯ ವ್ಯಕ್ತಪಡಿಸಿದರು.
ಅಶ್ವಥ್‌ ಸುಲಾಖೆ, ನಿತೀಶ್‌ ಸಾಲಿ, ಅರವಿಂದ ಪಟೇಲ್‌, ಮೇಹರ್‌ಅಲಿ ಢಾಲಾಯತ್‌, ಮಹ್ಮದ್‌ಅಲಿ ರೋಣ, ಶರಣಪ್ಪ ಸಾಸನೂರ, ಮಹ್ಮದ್‌ಅಲಿ ಕಲೇಗಾರ, ಅನ್ವರಸಾಬ ಖಾಜಿ, ಎ.ಎಂ.ಅನ್ಸಾರಿ ಸೇರಿದಂತೆ ಮುಸ್ಲಿಂ ಹಾಗೂ ಜೈನ್‌ ಸಮಾಜಬಾಂಧವರು ಪಾಲ್ಗೋಂಡಿದ್ದರು.

loading...