ಮರಾಠರ ಬೇಡಿಕೆ ಈಡೇರಿಕೆಗೆ ಬೀದಿಗಿಳಿದು ಹೋರಾಟ: ಘೋಟ್ನೇಕರ

0
32
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಮರಾಠಾ ಸಮಾಜವನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸಲು ಪೂರಕವಾಗುವಂತೆ 3ಬಿ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ಸೇರ್ಪಡೆಗೊಳಿಸುವ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಮರಾಠರು ಮತ್ತೆ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿರುವದಾಗಿ ವಿಧಾನ ಪರಿಷತ್‌ ಸದಸ್ಯರಾಗಿರುವ ತಾಲೂಕಾ ಮರಾಠಾ ಪರಿಷತ್‌ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ ತಿಳಿಸಿದ್ದಾರೆ.
ಇಲ್ಲಿನ ಮರಾಠಾ ಭವನದ ಪ್ರಾಂಗಣದಲ್ಲಿ ಜ.6 ರಂದು ಜರುಗಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮರಾಠಾ ಕ್ರಾಂತಿ ಮೋರ್ಚಾ ವತಿಯಿಂದ ಹಕ್ಕೊತ್ತಾಯ ಜನಬಲ ಪ್ರದರ್ಶನವನ್ನು ಯಶಸ್ವಿಯಾಗಿ ಮಾಡಲಾಗಿದೆ. ಆದರೂ ಸಹ ಸರ್ಕಾರದಿಂದ ಬೇಡಿಕೆ ಈಡೇರಿಕೆಗೆ ಸ್ಪಂದನೆ ದೊರೆಯದೇ ಇರುವುದು ನೋವುಂಟು ಮಾಡಿದೆ. ಹೀಗಾಗಿ ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ವತಿಯಿಂದ ಜ.29 ರಂದು ದಾಂಡೇಲಿಯಲ್ಲಿ ಬೃಹತ್‌ ಮರಾಠಾ ಕ್ರಾಂತಿ ಮೌನ ಮೋರ್ಚಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾಜದ ಪ್ರಮುಖರಾದ ಎಲ್‌.ಎಸ್‌. ಅರಸಿನಗೇರಿ, ಯು.ಕೆ. ಬೋಬಾಟಿ, ಮಂಗಲಾ ಕಶೀಲಕರ, ಶಂಕರ ಬೆಳಗಾಂವಕರ, ಅನಿಲ ಚವ್ಹಾಣ, ಆರ್‌.ಎಸ್‌. ಅರಸಿನಗೇರಿ, ಅರುಣ ಬೋಬಾಟಿ, ಅಪ್ಪಾರಾವ ಪೂಜಾರಿ, ಬಾಳಕೃಷ್ಣಾ ಶಹಾಪುರಕರ, ಯಲ್ಲಪ್ಪಾ ಮಾಲವಣಕರ, ಗೋವಿಂದ ದಲಾಲ, ಗಣಪತಿ ಕರಂಜೇಕರ, ಭಾರತಿ ಬಿರ್ಜೆ, ಪಾಂಡು ಪಾಟೀಲ, ಸುರೇಶ ಬೆಣಚೇಕರ, ಮಾರುತಿ ತೋರಸ್ಕರ ಮೊದಲಾದವರು ಪಾಲ್ಗೊಂಡಿದ್ದರು.

loading...