ಮಹಾನ ವ್ಯಕ್ತಿಗಳ ತತ್ವ ಅಳವಡಿಸಿಕೊಳ್ಳಿ: ಶಾಸಕ ಅಶೋಕ

0
29
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಮಹಾ ಮಾನವತಾ ಯೋಗಿ ಸಿದ್ದರಾಮೇಶ್ವರ ಸ್ವಾಮಿಗಳು ಭೋವಿ ಸಮಾಜಕ್ಕೆ ಸೀಮಿತವಾಗದೆ ಎಲ್ಲ ಜನರ ಶ್ರೇಯೋಭಿವೃದ್ದಿಗಾಗಿ ಅನೇಕ ಮಾರ್ಗದರ್ಶನ ಉಪದೇಶಗಳನ್ನು ನೀಡಿದ್ದಾರೆ. ಇಂತಹ ಮಾಹಾನ ವ್ಯಕ್ತಿಗಳ ತತ್ವೋದೇಶಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶಪ್ರಾಯ ಜೀವನ ನೆಡಸಬೇಕೆಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ತಿಳಿಸಿದರು.
ಸ್ಥಳೀಯ ಪುರಸಭೆಯ ಸರಸ್ವತಿ ಸಭಾಭವನದಲ್ಲಿ ಸೋಮವಾರ ನೆಡದ 846 ನೇಯ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೋವಿ ಸಮಾಜದ ಜನರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಸಮಾಜೀಕ ಆರ್ಥಿಕವಾಗಿ ಸಧೃಡರಾಗಿ ಸಮಾಜ ಮುಖ್ಯವಾಹಿನಿಗೆ ಬರಬೇಕು ಹಾಗೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭೋವಿ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಲಾಗಿದ್ದು ಅದರ ಮೂಲಕ ಅನೇಕ ರೀತಿಯ ಸೌಲಭ್ಯವನ್ನು ಒದಗಿಸುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ಭೋವಿ ಸಮಾಜದ ಅಭಿವೃದ್ದಿಗಾಗಿ ನಾನು ನನ್ನ ಕೈಲಾದಷ್ಟು ಸಹಾಯ ಸಹಕಾರ ಮಾಡುತ್ತನೇ ಸಮಾಜದ ಅಭಿವೃದ್ದಿಗಾಗಿ ದುಡಿಯಬೇಕೆಂದು ಹೇಳಿದರು.

ಶಿಕ್ಷಕ ಎಸ್‌.ವಿ.ಕಲ್ಯಾಣಶೆಟ್ಟಿ ಉಪನ್ಯಾಸ ನೀಡಿದರು, ಪುರಸಭೆಯ ಅಧ್ಯಕ್ಷ ರಾಜು ಮಾನೆ ಸಮಾಜ ಕಲ್ಯಾಣಾಧಿಕಾರಿ ಕೆ.ಎಸ್‌,ಕರ್ಕಿ,ಭೋವಿ ಎಚ್‌ ಎಸ್‌.ಪ್ರಬಾಕಾರ ಸಮಾಜದ ಯುವ ಅಧ್ಯಕ್ಷ ರಮೇಶ ಬಂಡಿವಡ್ಡರ, ಮುರಗೇಪ್ಪ ಬಂಡಿವಡ್ಡರ, ಚಂದ್ರು ಬಂಡಿವಡ್ಡರ. ಭೀಮಪ್ಪ.ಬಂಡಿವಡ್ಡರ, ದಾನಪ್ಪ ಬಂಡಿವಡ್ಡರ, ರಮೇಶ ಬಂಗಾರಕಡೆ, ವಿಠ್ಠಲ್ಲ ಬಂಡಿವಡ್ಡರ, ನಾರಾಯಣ ಬಂಡಿವಡ್ಡರ, ಅಶೋಕ ಬಂಡಿವಡ್ಡರ, ಯಂಕಪ್ಪ ಮುಗಳೋಳ್ಳಿ, ಮಲ್ಲೇಶಿ ಪೂಜೇರ, ದುರಗಪ್ಪ ಪಟಗುಂದಿ ಸೇರಿಂದತೆ ಸಮಾಜದಮುಖಂಡರು ಉಪಸ್ಥಿತರಿದ್ದರು ತಿಮ್ಮಣ್ಣ ಬಂಡಿವಡ್ಡರ ಸ್ವಾಗತಿಸಿದರು ಮಲ್ಲೇಶಿ ಬಂಡಿವಡ್ಡರ ನಿರೂಪಿಸಿದರು ವಂದಿಸಿದರು.

loading...