ಮುನಿಗಳ ಪಾದಯಾತ್ರೆ ಗದುಗಿನಲ್ಲಿ ಬಿಳ್ಕೋಡುಗೆ

0
23
loading...

ಗದಗ : ಕರ್ನಾಟಕ ಶ್ರವಣಬೆಳಗೋಳದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಗೊಮಟೇಶ್ವರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಮಧ್ಯಪ್ರದೇಶದ ಇಂದೂರ್‍ದಿಂದ ಪಾದಯಾತ್ರೆಯ ಮೂಲಕ ಬುಧವಾರ ಗದಗ ಜಿಲ್ಲೆಯನ್ನು ಪ್ರವೇಶಿಸಿದ 30 ದಿಗಂಬರ ಮುನಿಗಳ ತಂಡವು ಗದಗ-ಬೆಟಗೇರಿ ಅವಳಿ ನಗರದ ಮೂಲಕ ಮಲ್ಲಸಮುದ್ರವನ್ನು ತಲುಪಿದರು.
ಪೂಜ್ಯ 108 ಆಚಾರ್ಯ ಶ್ರೀ ವಿಸುಧಾ ಸಾಗರ್ ಜೀ ಮಹಾರಾಜ್ ಸರಸಂಘ ಅವರ ನೇತ್ರತ್ವದ 30 ದಿಗಂಬರ ಮುನಿಗಳು ಪಾದಯಾತ್ರೆಯ ಮಧ್ಯದಲ್ಲಿ ನಗರದ ಪಾಂಜರಪೋಳದ ಗೋಶಾಲೆಗೆ ಭೇಟಿ ನೀಡಿ ಇಲ್ಲಿನ ಶಿವಾನಂದ ನಗರದ ಶಾಂತಿನಾಥ ದಿಗಂಬರ ಜೈನ್ ಮಂದಿರದ ದರ್ಶನ ಪಡೆದು ಪಾದಯಾತ್ರೆಯನ್ನು ಮುಂದುವರೆಸಿ ಮಲ್ಲಸಮುದ್ರದ ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ತಂಗಿದರು.
ಜ. 11 ರಂದು ಗುರುವಾರ ಬೆಳಗಿನ ಜಾವ ಮಲ್ಲಸಮುದ್ರದಿಂದ ಮುಳಗುಂದ, ಹರ್ತಿ ಮಾರ್ಗವಾಗಿ ಮಾಗಡಿ ತಲುಪಿ ವಾಸ್ತವ್ಯ ಮಾಡುವರು. ಜ. 12 ರಂದು ಶುಕ್ರವಾರ ಬೆಳಗಿನ ಜಾವ ಲಕ್ಷ್ಮೇಶ್ವರಕ್ಕೆ ತೆರಳಿ ಅಲ್ಲಿನ ಶಂಖ ಬಸದಿಯಲ್ಲಿ ವಾಸ್ತವ್ಯ ಮಾಡಿ ಕೇಶಲೋಚನ ಕಾರ್ಯಕ್ರಮದ ನಂತರ ಜ. 14 ರಂದು ಬೆಳಿಗ್ಗೆ ಲಕ್ಷ್ಮೇಶ್ವರದಿಂದ ಮುಂದಿನ ಪ್ರವಾಸಕ್ಕೆ ಪಾದಯಾತ್ರೆ ಕೈಗೊಳ್ಳುವರು ಎಂದು ಸಂಘಟಿಕರು ತಿಳಿಸಿದ್ದಾರೆ.
ಮುನಿಗಳು ಗದುಗಿಗೆ ಆಗಮಿಸುತ್ತಿದ್ದಂತೆ ಗದಗ ಜಿಲ್ಲಾ ದಿಗಂಬರ ಜೈನ ಸಮಾಜದ ಗಣ್ಯರಾದ ಬಿ.ಎಸ್.ನಾವಳ್ಳಿ, ಎ.ಎನ್.ಬಸ್ತಿ, ಡಾ.ಕೆ.ಡಿ.ಪಾಟೀಲ, ಎಂ.ಟಿ.ಕಬ್ಬಿಣ, ವ್ಹಿ.ಎಂ.ಪಾಟೀಲ, ಪ್ರಕಾಶ ಮುತ್ತಿನ, ಮಹಾವೀರ ಹೊಂಬಣ್ಣವರ, ಯಶವಂತ ಸಿದ್ದಣ್ಣವರ, ಪಿ.ಜಿ.ನಾವಳ್ಳಿ, ಅಶೋಕ ಮುತ್ತಿನ, ಎ.ವೈ.ಇಂಚಲ, ಸಂಜಯ ನಾವಳ್ಳಿ, ಸುಮನ್ ಮುತ್ತಿನ, ಶೋಭಾ ಇಂಚಲ, ಸರೋಜಿನಿ ನಾವಳ್ಳಿ, ಸುಕನ್ಯಾ ಕುಲಕರ್ಣಿ, ಸುಜಾತಾ ಪಾಟೀಲ, ಪ್ರೀತಿ ನಾವಳ್ಳಿ ಹಾಗೂ ಗದುಗಿನ ಮೂರ್ತಿ ಪೂಜಕ ಜೈನ ಸಮಾಜದ ಅಧ್ಯಕ್ಷ ಮನೋಜ ಬಾಫಣಾ, ರಾಣಮಲ್ ಜೈನ್, ರಮೇಶ ಬಿದಾಮಿಯಾ, ಮುಲಥಾನಮಲ್ ಜೈನ್, ಗೌತಮ್ ಕವಾಡ, ಹೀರಾಚಂದ ಜೈನ್ ಮುಂತಾದವರು ಮುನಿಗಳನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಬಿಳ್ಕೋಟ್ಟರು.

loading...