ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯ

0
9
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ವಡಗಾವಿ ಲಕ್ಷ್ಮೀ ನಗರದ ದೇವಾಂಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಾಗರಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ನಾಗರಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೇವಾಂಗ ಮುಖ್ಯ ರಸ್ತೆ 15 ವರ್ಷಗಳಿಂದ ಡಾಂಬರೀಕರಣ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಸಂಚಾರ ನಡೆಸುವುದು ದುಸ್ತರವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಬೋರವೇಲ್‍ಗಳಿವೆ. ಅವುಗಳಿಗೆ ಪೈಪ್‍ಲೈನ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಪ್ರದೇಶದ ದೇವಾಂಗ ಮುಖ್ಯ ರಸ್ತೆ 1 ರಿಂದ 7ನೇ ವೃತ್ತದವರೆಗೆ ಸಮರ್ಪಕವಾಗಿ ಚರಂಡಿ, ಒಳಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಈ ಹಿಂದೆ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೂಡಲೇ ಈ ಪ್ರದೇಶದ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬಿಜೆಪಿ ಮುಖಂಡ ಪಾಂಡುರಂಗ ದೋತ್ರೆ, ಸದಾನಂದ ಗುಂಟೇಪ್ಪನವರ, ಯಲ್ಲಪ್ಪ ತಿಗಡಿ, ಭೋಜಪ್ಪ ಹಜೇರಿ, ದೇವೇಂದ್ರ ಏಕಬೋಟೆ, ಮೌಳೇಶ ಕಾಂಬಳೆ, ಭಾರತಿ ಚಿಲ್ಲಾಳ, ಪ್ರೇಮಾ ಏಕಬೋಟೆ, ಸಾವಿತ್ರಿ ಕಾಂಬಳೆ, ಪ್ರೇಮಾ ಹಜೇರಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...