ಮೇಸ್ತನ ಕುಟುಂಬಕ್ಕೆ ಸಾಂತ್ವನ ನಿಧಿ

0
16
loading...

ಹೊನ್ನಾವರ: ಪಟ್ಟಣದ ಶೆಟ್ಟಿಕೆರೆಯಲ್ಲಿ ಕಳೆದ ಡಿ.6 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿಂದು ಕಾರ್ಯಕರ್ತ ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್‌ಬಿ) ವತಿಯಿಂದ ಸಾಂತ್ವನ ನಿಧಿಯನ್ನು ಒಟ್ಟೂಗೂಡಿಸಿ 1 ಲಕ್ಷದ 25 ಸಾವಿರ ರೂಪಾಯಿಗಳನ್ನು ಪರೇಶನ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಹಿರಿಯರಾದ ಜೆ.ಟಿ.ಪೈ, ವಿಠ್ಠಲ ಪೈ, ವಿಶ್ವನಾಥ ನಾಯಕ, ಉಮೇಶ ಕಾಮತ, ಗಣಪತಿ ಕಾಮತ, ರಘು ಪೈ, ವಿಲಾಸ ಕಾಮತ, ಬಾಲಕೃಷ್ಣ ಬಾಳೇರಿ, ಸಂತೋಷ ಪ್ರಭು, ಪ್ರಕಾಶ ಪ್ರಭು, ವಿಜು ಕಾಮತ, ವಿಜಯ ಮಹಾಲೆ ಇತರರು ಉಪಸ್ಥಿತರಿದ್ದರು.

loading...