ಮೈಸೂರು ಎಸ್‌ಪಿ ರವಿ ಚನ್ನಣವರಗೆ ವಿಶ್ವಚೇತನ ಪ್ರಶಸ್ತಿ

0
24
loading...

ಚಿಕ್ಕೋಡಿ 18: ಯುವಕರೇ ಈ ದೇಶದ ಶಕ್ತಿ ಯವಕರಿಂದ ದೇಶ ಕಟ್ಟಲು ಸಾಧ್ಯ. ಗಡಿಭಾಗದ ಯಡೂರನ್ನು ದಕ್ಷಿಣಭಾರತದ ಕಾಶಿಯನ್ನಾಗಿಸಿದ ಕೀರ್ತಿ ಶ್ರೀಶೈಲ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ಮೈಸೂರು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ರವಿ ಚನ್ನಣವರ ಹೇಳಿದರು. ತಾಲೂಕಿನ ಸುಕ್ಷೇತ್ರ ಯಡೂರಿನ ವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ಹಮ್ಮಿಕೊಂಡ ವಿಶ್ವಚೇತನ ಪ್ರಶಸ್ತಿ ಪ್ರಧಾನ ಸಮಾರಂಭವದಲ್ಲಿ ಪ್ರ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ವ್ಯಕ್ತಿ ಬೆಳೆಯಬೇಕಾದರೆ ಜನರ ಸಹಕಾರ ಅವಶ್ಯಕತೆವಿದ್ದು ಜನರೇ ನಮ್ಮನ್ನು ಬೆಳೆಸಿದ್ದಾರೆ. ಸಮಾಜಕ್ಕಾಗಿ ಎಲ್ಲರೂ ಒಂದಾಗಿ ಶ್ರಮಿಸಬೇಕೆಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಮಖಂಡಿಯ ಪ್ರಭುಲಿಂಗೇಶ್ವರ ಶುಗರ್ಸ ಅಧ್ಯಕ್ಷ ಜಗದೀಶ ಗುಡಗಂಟಿಮಠ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅವಶ್ಯಕತೆವಿದೆ. ಧರ್ಮವಂತ ಸಮಾಜ ನಿರ್ಮಾಣ ಮಾಡುವ ಶಕ್ತಿ ಮಠಮಾನ್ಯಗಳಿದೆ. ವೇದಿಕೆ ಮೇಲೆ ಬೆಳ್ಳಂಕಿಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊಸಳ್ಳಿಯ ಶ್ರೀ ಬೂದಿಶ್ವರ ಸ್ವಾಮೀಜಿ, ಮೈಶಾಳದ ಶ್ರೀ ಡಾ ಶಿವಯೋಗಿ ಶಿವಚಾರ್ಯ ಸ್ವಾಮೀಜಿ, ಸವದತ್ತಿಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೇರಗಂಡಿಯ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಅಜಯ ಸೂರ್ಯವಂಶಿ, ಶ್ರೀಕಾಂತ ಉಮರಾಣೆ, ಅಮರ ಬೋರಗಾಂವೆ ಮುಂತಾದವರು ಉಪಸ್ಥಿತರಿದ್ದರು.

loading...