ಮೊಬೈಲ್‌ ವ್ಯಾಮೋಹ ಬೀಡಿ: ರುದ್ರಪ್ಪ ಲಮಾಣಿ

0
22
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿ ಭವಿಷ್ಯ ರೂಪಿಸಿಕೊಳ್ಳಬೇಕು. ಕಾಲೇಜ ವಿದ್ಯಾರ್ಥಿಗಳು ಮೊಬೈಲ್‌ ಪೋನ್‌ ಅವಶ್ಯಕತೆಗೆ ತಕ್ಕಷ್ಟು ಬಳಸಿಕೊಳ್ಳಿ ಹೆಚ್ಚಿನ ವ್ಯಾಮೋಹ ಬೇಡ ಅಬ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿ ಎಂದು ವಿದ್ಯಾರ್ಥಿಗಳಿಗೆ ಮುಜರಾಯಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸಲಹೆ ನೀಡಿದರು.
ಪಟ್ಟಣದ ಶ್ರೀಮತಿ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸವಣೂರ, ಬಂಕಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹಾಗೂ ಬಂಕಾಪೂರ ಪಾಲಿಟೆಕ್ನೀಕ್‌ ಕಾಲೇಜಿನ ಎಸ್‌.ಸಿ ಎಸ್‌.ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ ಟಾಪ್‌ ವಿತರಣೆ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವದು ಅವಶ್ಯವಾಗಿದೆ ಹಿಗಾಗಿ ನಮ್ಮ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹ ನೀಡುವದು, ವಿದ್ಯಾಸಿರಿ ಯೋಜನೆ, ಹೆಚ್ಚು ಹಾಸ್ಟೆಲ್‌ಗಳನ್ನು ನಿರ್ಮಿಸಿ ಹಲವು ಯೊಜನೆಗಳನ್ನು ಜಾರಿಗೆ ತಂದಿದೆ. ವಿತರಿಸಿದ ಲ್ಯಾಪ್‌ ಟಾಪ್‌ ಗಳನ್ನು 14000 ವೆಚ್ಚದಲ್ಲಿ ಖರಿದಿಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯವಿರುವ ಮಾಹಿತಿಯನ್ನು ಅದರಲ್ಲಿ ಅಳವಡಿಸಲಾಗಿದೆ ವಿದ್ಯಾರ್ಥಿಗಳು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಸದುಪಯೊಗ ಪಡಿಸಿಕೊಳ್ಳಬೇಕು, ಕಾಂಗ್ರೆಸ್‌ ಸರ್ಕಾರ ನಾಲ್ಕುವರೇ ವರ್ಷದ ಆಡಳಿತದಲ್ಲಿ ಎಲ್ಲ ವರ್ಗದ ಜನರಿಗೆ ಸರ್ಕಾರದ ಎಲ್ಲ ಭಾಗ್ಯಗಳ ಯೋಜನೆಗಳನ್ನು ಮುಟ್ಟಿಸುವಂತ ಪ್ರಯತ್ನ ಮಾಡುತ್ತಿದೆ, ಮತ್ತು ಎಲ್ಲ ಜಾತಿಯ ಇಂಜನೀಯರಿಂಗ್‌ ಹಾಗೂ ಮೆಡಿಕಲ್‌ ವಿದ್ಯಾರ್ಥಿಗಳಿಗೆ 1 ಲಕ್ಷ 50 ಸಾವಿರ ಲ್ಯಾಪ್‌ಟಾಪ ವಿತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು. ಸ್ವಾಮಿ ವಿವೇಕಾನಂದರು ಚೈತನ್ಯದ ಚಿಲುಮೆ, ತತ್ವe್ಞಾನಿ, ಜಗತ್ತಿಗೆ ಉತ್ತಮ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ ಆಧುನಿಕತೆಗೆ ತಂತ್ರe್ಞಾನದ ಬಳಕೆ ಶಿಕ್ಷಣಕ್ಕೆ ಅವಶ್ಯವಿದೆ, ಮನುಷ್ಯನ ಮೆದುಳಿನ ಕೆಲಸವನ್ನು ಮಷಿನ್‌ಗಳು ಮಾಡುತ್ತದೆ, ಮನುಷ್ಯ ಯಂತ್ರಗಳನ್ನು ಸೇವಕನಂತೆ ಕಾಣಬೇಕು ನಾಯಕನಾಗಿ ಕಾಣಬಾರದು, ಇಂದು ಎಲ್ಲ ವಲಯಗಳಲ್ಲಿ ಜಾಗತೀಕರಣ ನುಗ್ಗಿದೆ, ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಬೇಕಾಗಿದೆ, ನಮ್ಮ e್ಞಾನ ನಮ್ಮ ಕೈಯಲ್ಲಿರಬೇಕು, ತಂತ್ರe್ಞಾನ ಬಳಕೆ ಮಾಡಿದರೆ ಉನ್ನತಿ ದುರುಪಯೊಗ ಮಾಡಿದರೆ ಅವನತಿಯಾಗುತ್ತದೆ, ಮನುಷ್ಯನ ಮೂಲಭುತ ಬದಲಾವಣೆ ಬರುವದು ವ್ಯಕ್ತಿಯಿಂದ ಮಾತ್ರ ಸಾದ್ಯ, ಸಾಧನೆ ಮಾಡಿವ ಶಕ್ತಿ ಮನುಷ್ಯನಲ್ಲಿರುತ್ತದೆ ಮನುಷ್ಯನ ಬುದ್ದಿಶಕ್ತಿ ಮತ್ತು ಹೊಂದಾಣಿಕೆಯ ಗುಣ ಸಮರ್ಪಕವಾಗಿ ಬಳಕೆಯಾಗಬೇಕು.
ಆಧ್ಯಾತ್ಮಕ ಚಿಂತನೆಯ ಹಾಗೂ ಜಗತ್ತಿನ ಸುರ್ಯ ಸ್ವಾಮಿ ವಿವೇಕಾನಂದರು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಉಚಿತ ಲಾಪ್‌ ಟಾಪ್‌ ಯೋಜನೆ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು ಅಂದಾಗ ವಿದ್ಯಾರ್ಥಿಗಳ ಅಭಿವೃದ್ದಿಯಾಗುತ್ತದೆ ಎಂದು ಆಗ್ರಹಿಸಿದರು ಮತ್ತು ತಮ್ಮ ಟ್ರಷ್ಟ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಉತ್ತಮ ಶಿಕ್ಷಕರಿಗೆ ಪ್ರೋತ್ಸಾಹ ಹಿಗೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ ಮತ್ತು ವಿತರಿಸಿದ ಲ್ಯಾಪ್‌ ಟಾಪ್‌ ನಲ್ಲಿ ದೇವರಿದ್ದಾನೆ ಎಂದು ತಿಳಿದು ವಿದ್ಯಾರ್ಥಿಗಳನ್ನು ಅದನ್ನು ಉಪಯೋಗಿಸಬೇಕು ಎಂದರು.
ಪ್ರಾಂಶುಪಾಲರಾದ ಬಿ.ಜಿ.ಅರಿಶಿನಗುಪ್ಪಿ, ಪಂಚಾಕ್ಷರಯ್ಯ ಹಿರೇಮಠ, ಉಪನ್ಯಾಸಕರಾದ ಎಸ್‌.ಜಿ.ವಿಭೂತಿ, ಬಿ.ಸಿ.ನಿಡಗುಂದಿ, ನಾಗಲಾಪೂರ ಸೇರಿದಂತೆ ಶಿಗ್ಗಾವಿ, ಸವಣೂರ, ಬಂಕಾಪೂರ ಕಾಲೇಜುಗಳ ಪ್ರಾಂಶುಪಾಲು, ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

loading...