ಯುವಕ ರೈಲ್ವೆಗೆ ಬಿದ್ದು ಆತ್ಮಹತ್ಯೆ

0
31
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ 30 ವರ್ಷದ ವ್ಯಕ್ತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಜಾಧವ ನಗರದ ಶಿವಪ್ರತಾಪ ಎಂ. ಎಂದು ಗುರುತಿಸಲಾಗಿದೆ. ಈತ ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ, ಮಾನಸಿಕವಾಗಿ ನೊಂದಿದ್ದ ಈತ ಶನಿವಾರ ನಾಲ್ಕನೇ ರೈಲ್ವೆ ಗೇಟ್ ಬಳಿ ಇರುವ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ರೈಲ್ವೆ ಪೊಲೀಸರಿಗೆ ಕುಟುಂಬಸ್ಥರು ಆಗಮಿಸಿ ಮೃತ ದೇಹವನ್ನು ಪತ್ತೇ ಹಚ್ಚಿದ್ದಾರೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

loading...